ಐಪಿಎಸ್ ಅಧಿಕಾರಿ ಪ್ರತಾಪ್​ ರೆಡ್ಡಿ ರಾಜೀನಾಮೆ

ಐಪಿಎಸ್ ಅಧಿಕಾರಿ ಪ್ರತಾಪ್​ ರೆಡ್ಡಿ ರಾಜೀನಾಮೆ

ಬೆಂಗಳೂರು: ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಾಪ್ ರೆಡ್ಡಿ ಅವರು ಅವಧಿಗೂ ಮುನ್ನ ಹರಾಜಿನಾಮೆ ನೀಡಿದ್ದಾರೆ.

ಪ್ರತಾಪ್ ರೆಡ್ಡಿ ಅವರಿಗೆ ಇದೇ ವರ್ಷ ಮೇ 30ರಂದು ಅಧಿಕಾರದ ಅವಧಿ ಮುಗಿತ ಬಂದಿದೆ. ಆದರೆ ಎರಡು ತಿಂಗಳು ಮುಂಚಿತವಾಗಿ ಪ್ರತಾಪ್ ರೆಡ್ಡಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನು ವಯಕ್ತಿಕ ಕಾರಣಗಳಿಂದ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಸ್ತುತ ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ (DGP) ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್​ ರೆಡ್ಡಿ ಅವರ ನಿವೃತ್ತಿಗೆ ಇನ್ನು ಎರಡು ತಿಂಗಳು ಬಾಕಿ ಇತ್ತು. ಇದೇ ವರ್ಷ ಮೇ ತಿಂಗಳು ನಿವೃತ್ತಿಯಾಗುತ್ತಿದ್ದರು.

ಆದರೆ ವೈಯಕ್ತಿಕ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬರುವ ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

Related