ಐಪಿಎಲ್ 13 ಸೀಸನ್ ಮುಂದೂಡಿಕೆ.!

ಐಪಿಎಲ್ 13 ಸೀಸನ್ ಮುಂದೂಡಿಕೆ.!

ನವದೆಹಲಿ, ಮಾ. 14 : ಕೊರೊನಾ ವೈರಸ್ ಹೊಡೆತಕ್ಕೆ ಮಾ. 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಪಂದ್ಯಗಳ ಟೂರ್ನಿ ಏ. 15ಕ್ಕೆ ಮುಂದೂಡಿಕೆಯಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಮತ್ತು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು, ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ಈ ಸಂಬಂಧ ಐಪಿಎಲ್ನಲ್ಲಿ ಆಡುವ ಎಲ್ಲ ಎಂಟು ಪ್ರಾಂಚೈಸ್ಗಳಿಗೂ ಮಾಹಿತಿ ನೀಡಲಾಗಿದೆ.
ಇದೇ ವಿಚಾರವಾಗಿ ತಂಡಗಳ ಮಾಲೀಕರೊಂದಿಗೆ ಚರ್ಚಿಸಲಾಗುವುದು ಎಂದು ಐಪಿಎಲ್ ಮಂಡಳಿ ಹೇಳಿದೆ. ಪ್ರಾಂಚೈಸ್ಗಳು, ಸಾರ್ವಜನಿಕರ ಆರೋಗ್ಯದ ಬಗ್ಗೆ ಬಿಸಿಸಿಐ ಕಾಳಜಿ ಮತ್ತು ಸೂಕ್ಷ್ಮ ಸಂವೇದನೆ ಹೊಂದಿದೆ. ಅಗತ್ಯ ಇರುವ ಎಲ್ಲ ಕ್ರಮ ಕೈಗೊಳ್ಳಲಿದ್ದೇವೆ. ಅಭಿಮಾನಿಗಳನ್ನೂ ಸೇರಿದಂತೆ ಐಪಿಎಲ್ಗೆ ಸಂಬಂಧಿಸಿದ ಎಲ್ಲರೂ ಸುರಕ್ಷಿತ ಕ್ರಿಕೆಟ್ನ ಅನುಭವ ಹೊಂದುವಂತಾಗಬೇಕು ಎಂದು ಐಪಿಎಲ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Related