ಐಪಿಎಲ್‍ಗೆ ವೀಕ್ಷಕರ ಪ್ರವೇಶ ನಿರ್ಬಂಧ?

ಐಪಿಎಲ್‍ಗೆ ವೀಕ್ಷಕರ ಪ್ರವೇಶ ನಿರ್ಬಂಧ?

ನವದೆಹಲಿ: ಈ ವರ್ಷ ಐಪಿಎಲ್ ಪಂದ್ಯಾವಳಿ ನಡೆದರೂ ವೀಕ್ಷಕರಿಗೆ ಪ್ರವೇಶ ನೀಡುವ ಸಾಧ್ಯತೆ ಇಲ್ಲ ಎಂದು ಮಾಜಿ ಸ್ಪಿನ್ನರ್, ಕಿಂಗ್ಸ್ ಇಲೆವೆನ್ ತಂಡದ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

“ಈ ವರ್ಷದ ಐಪಿಎಲ್ ಪಂದ್ಯಾವಳಿ ವರ್ಷಾಂತ್ಯದಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಇದರ ವೇಳಾಪಟ್ಟಿಯನ್ನು ಕಡಿಮೆಮಾಡಬೇಕಾಗಬಹುದು. ವೀಕ್ಷಕರಿಗೆ ನಿರ್ಬಂಧ ವಿಧಿಸಿದರೆ ಆಗ ಕೇವಲ 3 ಅಥವಾ 4 ತಾಣಗಳಲ್ಲಿ ಪಂದ್ಯಗಳನ್ನು ಆಯೋಜಿಸಬಹುದು’ ಎಂದು ಐಸಿಸಿ ಕ್ರಿಕೆಟ್ ಕಮಿಟಿ ಅಧ್ಯಕ್ಷ ಕುಂಬ್ಳೆ ಹೇಳಿದರು.

ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, “ಈ ವರ್ಷ ಐಪಿಎಲ್ ನಡೆಯುವ ಸಾಧ್ಯತೆ ಇದೆ. ಆಗ ಪ್ರಯಾಣವನ್ನು ಮೊಟಕುಗೊಳಿಸುವ ಉದ್ದೇಶದಿಂದ 3-4 ಕ್ರೀಡಾಂಗಣವಿರುವ ನಗರಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಪಂದ್ಯಾವಳಿಯನ್ನು ಬೇಗ ಮುಗಿಸಬಹುದು’ ಎಂದರು.

Related