ಚಿಹ್ನೆ ಬದಲು: ಮತದಾನ ರದ್ದು

ಚಿಹ್ನೆ ಬದಲು: ಮತದಾನ ರದ್ದು

ಬಾಗಲಕೋಟೆ : ತಾಲೂಕಿನ ಕಲಾದಗಿ ಗ್ರಾ.ಪಂ. ಚುನಾವಣೆಯ ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು ಬದಲು ಆಗಿದ್ದರಿಂದ ಮತದಾನ ರದ್ದುಮಾಡಿ, 29ಕ್ಕೆ ಮರು ಮತದಾನ ನಡೆಸಲು ನಿರ್ಧರಿಸಲಾಗಿದೆ.

ಕಲಾದಗಿ ಗ್ರಾಮದ ಮತಗಟ್ಟೆ ಸಂಖ್ಯೆ 51 ರ ಅಭ್ಯರ್ಥಿಗಳಾದ ಹಸನ್ಮಹದ್ ರೋಣದ ಹಾಗೂ ಶಹನಾಜ ಬೇಗಂ ಅವರ ಚಿಹ್ನೆಗಳು ಅದಲು ಬದಲಾಗಿವೆ.

ಮತದಾನ ಆರಂಭದಲ್ಲೇ ಈ ದೋಷ ಗಮನಕ್ಕೆ ಬಂದಿದ್ದು, ತಕ್ಷಣ ಮತದಾನ ಸ್ಥಗಿತಗೊಳಿಸಿದರು. ಹೊಸದಾಗಿ ಮತಪತ್ರಗಳ ಮುದ್ರಣ ಮಾಡಿ, ಡಿ.29ರಂದು ಮತದಾನ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Related