ಕರಗದ ಮೇಲು ಕೊರೋನಾ

ಕರಗದ ಮೇಲು ಕೊರೋನಾ

ಬೆಂಗಳೂರು, ಮಾ.11 : ಈಗ ಎಲ್ಲೆಲ್ಲೂ ಕರೋನಾ ಸದ್ದು, ವಿಶ್ವವಿಖ್ಯಾತ ಬೆಂಗಳೂರು ಕರಗದ ಮೇಲೆ ಕೊರೋನಾ ವೈರಸ್ ಕರಾಳ ಛಾಯೆ ಬೀರಿದೆ. ಪಾರಂಪರಿಕ ಧಾರ್ಮಿಕ ಆಚರಣೆಯಾದ ಬೆಂಗಳೂರು ಕರಗಕ್ಕೆ ಕೊರೋನಾ ಆತಂಕ ಎದುರಾಗಿದ್ದು, ಯಾವ ರೀತಿ ಉತ್ಸವ ಆಚರಿಸಬೇಕೆಂದು ಮುಜರಾಯಿ ಇಲಾಖೆ ಅಧಿಕಾರಿಗಳಲ್ಲಿ ಗೊಂದಲ ಎದುರಾಗಿದೆ.
ಮಾ.31ಕ್ಕೆ ಕರಗ ಆರಂಭವಾಗಿ ಏ.8ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ, ಬೆಂಗಳೂರು ಟೆಕ್ಕಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕರಗ ಉತ್ಸವಕ್ಕೆ ಕಂಟಕ ಎದುರಾಗಿದೆ. ದೇವಾಲಯದ ಆಡಳಿತ ಮಂಡಳಿ, ಮುಜರಾಯಿ ಇಲಾಖೆ ಅಧಿಕಾರಿಗಳು, ಭಕ್ತರಲ್ಲಿ ಕರಗ ಆಚರಣೆ ಸಂಬಂಧ ಏನು ಮಾಡಬೇಕು ಎಂಬುದರ ಬಗ್ಗೆ ದಿಕ್ಕು ತೋಚದಾಗಿದೆ.

Related