ನಿರಾಶ್ರಿತರ ಪರಿಹಾರಕ್ಕೆ ಒತ್ತಾಯ

ನಿರಾಶ್ರಿತರ ಪರಿಹಾರಕ್ಕೆ ಒತ್ತಾಯ

ಮುದ್ದೇಬಿಹಾಳ : ತಾಲೂಕು ತೀರಾ ಹಿಂದುಳಿದ ಮಾತ್ರವಲ್ಲದೇ ಬರಪೀಡಿತ ಎಂಬ ಹಣೆ ಪಟ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ ಎಂಬುದು ತಾಲೂಕಿನ  ರೈತರ ನೋವಿನ ಮಾತು.

ನೆರೆ ರಾಜ್ಯಗಳಾದ ಮಹಾರಾಷ್ಟçದಲ್ಲಿ ಭಾರಿ ಪ್ರಮಾಣ ಮಳೆ ಸುರಿಯುತ್ತಿರುವ ಹಿನ್ನೆಲೆ ಕಬಿನಿ ಅಣೆಕಟ್ಟಿನ ಮೂಲಕ ಆಲಮಟ್ಟಿ ಲಾಲಬಾಹಾದ್ದೂರ ಶಾಸ್ತಿç ಅಣೆಕಟ್ಟಿಗೆ ನಿತ್ಯ 2 ರಿಂದ ಮೂರು ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಡಲಾಗುತ್ತಿದೆ.

ಹಾಗಾಗಿ ಆಲಮಟ್ಟಿ ಜಲಾಶಯದಿಂದ ಒಳ ಹರಿವು ಹೆಚ್ಚಾಗುತ್ತಿರುವುದರಿಂದ 2ರಿಂದ 2.5 ಲಕ್ಷ ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಅದರಂತೆ ನಾರಾಯಣಪುರ ಜಲಾಶಯದಿಂದಲೂ ಹೆಚ್ಚುವರಿ ನೀರು ಹರಿಬಿಡಲಾಗುತ್ತಿದೆ. ಒಂದು ವೇಳೆ ನಾರಾಯಣಪುರ ಜಲಾಶಯದಿಂದ ನೀರನ್ನು ಹೊರಬಿಡುವುದನ್ನು ನಿಲ್ಲಿಸಿದ್ದಲ್ಲಿ ಈ ಭಾಗದ ಸುಮಾರು 15 ಗ್ರಾಮಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಳ್ಳುತ್ತದೆ.

ಈಗಾಗಲೇ ಜಿಲ್ಲಾಧಿಕಾರಿಗಳ ಅದೇಶದಂತೆ ತಾಲೂಕಿನ ಇತರೆ ಗ್ರಾಮಗಳಿಗೆ ತೆರಳಿ ಪ್ರವಾಹ ಬೀತಿ ಎದುರಾಗುವ ಸಂಭವ ಅರಿತು ಆಯಾ ಗ್ರಾಮಗಳ ಮುಖಂಡರ ರೈತರೊಂದಿಗೆ ಮಾತನಾಡಿ ಪ್ರವಾಹದ ಎಸ್ ಮಳಗಿ, ತಹಶಿಲ್ದಾರ ಜಾಗೃತಿ ಮೂಡಿಸಲಾಗಿದೆ.

Related