ಬೆಳೆ ಬೆಂಬಲ ಕೇಂದ್ರ ತೆರೆಯಲು ಒತ್ತಾಯ

ಬೆಳೆ ಬೆಂಬಲ ಕೇಂದ್ರ ತೆರೆಯಲು ಒತ್ತಾಯ

ನರಗುಂದ  :  ಕಳೆದ ಸಾಲಿನಲ್ಲಿ ರೈತರು ಬೆಳೆದ ಹೆಸರು ಉತ್ಪನ್ನವನ್ನು ಸರ್ಕಾರ ಖರೀದಿಸಿತ್ತು. ಈ ಭಾರಿಯೂ ಸಕಾಲಕ್ಕೆ ಹೆಸರು ಬೆಳೆ ಬೆಂಬಲ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಲು ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ ತಿಳಿಸಿದ್ದಾರೆ.

ಪತ್ರಿಕೆ ಮೂಲಕ ತಿಳಿಸಿರುವ ಅವರು, ಈ ಭಾರಿ ರೈತರು ತೊಂದರೆಯಲ್ಲಿದ್ದಾರೆ. ಮಳೆಯಿಂದ ರೈತರು ಬೆಳೆದ ಹೆಸರು ಬೆಳೆ ಕಡಿಮೆ ಪ್ರಮಾಣದಲ್ಲಿ ಬರಬಹುದೆಂಬ ಅಂದಾಜಿದೆ. ಸರ್ಕಾರ ಹೆಸರು ಮತ್ತು ಅಲಸಂದಿ ಬೆಳೆ ಉತ್ಪನ್ನವನ್ನು ಕನಿಷ್ಟ ಕ್ವಿಂಟಾಲ್‌ಗೆ 10 ಸಾವಿರ ರೂ ದಂತೆ ಖರೀದಿಸಬೇಕು.

ಈ ಬೇಡಿಕೆಗೆ ಆಗ್ರಹಿಸಿ ಆ. 17 ರಂದು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇದನ್ನು ಸರ್ಕಾರ ಪುರಸ್ಕರಿಸಿ ಮಾನ್ಯತೆ ಮಾಡಬೇಕು. ಜಿಲ್ಲಾಧಿಕಾರಿಗಳು ಈ ಬೇಡಿಕೆಯನ್ನು ತಿರಸ್ಕರಿಸಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದಿರು ರೈತ ಸೇನಾ ಸದಸ್ಯರಿಂದ ಧರಣಿ ಸತ್ಯಾಗ್ರಹ ಕೈಗೊಳ್ಳಲು ನಿರ್ಣಯಿಸಲಾಗಿದೆ. ಸರ್ಕಾರ ಈ ಕೂಡಲೇ ಬೇಡಿಕೆ ಈಡೇರಿಸುವ ಕ್ರಮ ಕೈಗೊಳ್ಳುವಂತೆ ಸೊಬರದಮಠ ತಿಳಿಸಿದ್ದಾರೆ.

Related