ಪ್ರತಿಮೆಗೆ ಭಂಗ ಬರದಂತೆ ಕ್ರಮಕ್ಕೆ ಒತ್ತಾಯ

ಪ್ರತಿಮೆಗೆ ಭಂಗ ಬರದಂತೆ ಕ್ರಮಕ್ಕೆ ಒತ್ತಾಯ

ಗಂಗಾವತಿ : ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಮುಂತಾದ ಅವಮಾನಕರ ಕೃತ್ಯಗಳು ನಡೆಯುತ್ತಿದ್ದರೂ ರಾಜಕೀಯ ವ್ಯಕ್ತಿಗಳು ಕಣ್ಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ನುಡಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಸರ್ಕಾರಕ್ಕೆ ತಹಶೀಲ್ದಾರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ಬೆಳಗಾವಿಯಲ್ಲಿ ಮರಾಠರಿಂದ ಗಲಾಟೆಗಳು ನಡೆಯುತ್ತಿದ್ದು, ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ, ಅಲ್ಲದೆ ಬೆಳಗಾವಿಯಲ್ಲಿ ಇತ್ತೀಚಿಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸಿದ್ದು, ಗಲಾಟೆಯಲ್ಲಿ ಪ್ರತಿಮೆಯನ್ನು ಧ್ವಂಸ ಮಾಡುವ ಹುನ್ನಾರ ನಡೆಸಿದರು, ನಡೆಸಬಹುದು ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬೆಳಗಾವಿಯಲ್ಲಿ ನಡೆಯುತ್ತಿರುವ ಗಲಾಟೆಯನ್ನು ನಿಯಂತ್ರಿಸಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು, ರಾಜಕೀಯ ವ್ಯಕ್ತಿಗಳು ಸುಖ ಸುಮ್ಮನೆ ಸಂಗೊಳ್ಳಿ ರಾಯಣ್ಣನ ಹೆಸರು ಬಳಸಿಕೊಂಡು ವೋಟ್ ಬ್ಯಾಂಕ್ ಮಾಡಿದ್ದು ಸಾಕು, ರಾಯಣ್ಣನ ಬ್ರಿಗೇಡ್ ಮಾಡಲು ಹೊರಟ ರಾಜಕೀಯ ವ್ಯಕ್ತಿಗಳು ಈಗ ಏನು ಮಾಡುತ್ತಿದ್ದಾರೆ? ಕೂಡಲೇ ರಾಜಕೀಯ ವ್ಯಕ್ತಿಗಳು ಮುಂದಾಗಿ ಬೆಳಗಾವಿಯ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಬೇಕು, ಮಹಾರಾಷ್ಟ್ರದವರು ಕನ್ನಡಿಗರ ಮೇಲೆ ದಬ್ಬಾಳಿಕೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ, ಹಲ್ಲೆ, ಚಪ್ಪಲಿ ಎಸೆತ, ಅಲ್ಲದೆ ಕನ್ನಡ ನಾಡಿನ ಧ್ವಜದ ಅಪಮಾನ, ಕನ್ನಡದ ಮಹನೀಯರನ್ನು ಅವಮಾನಿಸುವುದು ನಡೆಯುತ್ತಲೇ ಇದೆ ಎಂದು ಕಿಡಿಕಾರಿದರು.
.

Related