ಉನ್ನತ ಮಟ್ಟದ ತನಿಖೆಗೆ ಒತ್ತಾಯ

ಉನ್ನತ ಮಟ್ಟದ ತನಿಖೆಗೆ ಒತ್ತಾಯ

ಲಿಂಗಸುಗೂರು : ತಾಲೂಕಿನ ಕಾಳಾಪೂರ ಗ್ರಾ.ಪಂ ವ್ಯಾಪ್ತಿಯ ಯಲಗಲದಿನ್ನಿ ಸಿಮಾಂತರದಲ್ಲಿ 22 ಅಕ್ರಮ ಲೇಔಟ್‌ಗಳ ನಿರ್ಮಿಸಿ ಮಾರಾಟ ಮಾಡುತ್ತಿರುವ ಮಾಲೀಕರು ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಅಕ್ರಮವಾಗಿ ನಿರ್ಮಾಣವಾಗುತ್ತರುವ ಲೇಔಟ್‌ಗಳ ತನಿಖೆಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಹಾಯಕ ಆಯುಕ್ತ ರಾಜಶೇಖರ ಡಂಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

22 ಲೇಔಟ್‌ಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೇ ಮಾರಾಟ ಮಾಡುತ್ತಿರುವುದರಿಂದ ಪ್ಲಾಟ್ ಖರೀದಿ ಮಾಡಿದವರು ತೊಂದರೆ ಅನುಭವಿಸುವಂತಾಗಿದೆ. ಲೇಔಟ್‌ಗಳ ಮಾಲೀಕರು ಮತ್ತು ಅಧಿಕಾರಿಗಳು ಶಾಮೀಲಾಗಿ ಅಕ್ರಮವಾಗಿ ಲೇಔಟ್‌ಗಳ ನಿರ್ಮಾಣ ಹೆಚ್ಚಾಗುತ್ತಿದೆ. ಲೇಔಟ್‌ಗಳಲ್ಲಿ ಪಾರ್ಕ್, ಸಾರ್ವಜನಿಕ ಸೌಲಭ್ಯಕ್ಕಾಗಿ ಸ್ಥಳವನ್ನು ಮೀಸಲಿಡಬೇಕು ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂಬ ನಿಯಮವಿದೆ.

ಆದರೆ ಈ ಯಾವ ನಿಯಮಗಳು ಪಾಲನೆಯಾಗುತ್ತಿಲ್ಲ. ಅನುಮತಿ ಕೊಡಬೇಕಾದ ಅಧಿಕಾರಿಗಳೇ ಕುಳಿತಿರುವುದು ಅಧಿಕಾರಿಗಳ ಮೇಲೆ ಸಂಶಯ ಮೂಡುವಂತಾಗಿದೆ. ಕಾರಣ ಅಕ್ರಮ ಲೇಔಟ್‌ಗಳ ನಿರ್ಮಾಣದ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Related