ಉರ್ದು ಬೋರ್ಡ್ ಒಳಗೆ ಕನ್ನಡ ಕಲಿಸಿದ ಮಠ

ಉರ್ದು ಬೋರ್ಡ್ ಒಳಗೆ ಕನ್ನಡ ಕಲಿಸಿದ ಮಠ

ಔರಾದ್ : ಭಾಲ್ಕಿ ಹಿರೇಮಠ ಸಂಸ್ಥಾನ ಪೂಜ್ಯ ಡಾ. ಬಸವಲಿಂಗ ಪಟ್ಟ ದೇವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕರ್ನಾಟಕ ಸರ್ಕಾರದ ಬಸವ ರಾಷ್ಟ್ರೀಯ ಪುರಸ್ಕಾರ ಪ್ರಧಾನ ಮಾಡಿದರು.

ಮಠದಲ್ಲಿ ರಜಾಕಾರರು ಹಾವಳಿ ಸಮಯದಲ್ಲಿ ಕನ್ನಡ ಉಳಿಸಲು ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸಿದ ಮಠ ಎಂದೆ ಖ್ಯಾತಿ ಪಡೆದ ಭಾಲ್ಕಿ ಮಠ, ಶ್ರೀಗಳು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅನಾಥ ಮಕ್ಕಳಿಗೆ ಆಶ್ರಿತತರು, ಬಸವ ಧರ್ಮ ಪ್ರಚಾರ ಮಾಡಿದವರು,  ಮಠಗಳೆಂದರೆ ಮತ-ಧರ್ಮ ಸಂರಕ್ಷಣೆ ಎಂಬ ಸಿದ್ಧನಂಬಿಕೆಗಳನ್ನು ಮುರಿದು ನಾಡು ನುಡಿ ಸಂರಕ್ಷಣೆಗೆ ನಿಂತು. ಕನ್ನಡ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆಂದು ಬಲವಾಗಿ ಪ್ರತಿಪಾದಿಸಿದ್ದೇ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಇವರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ದೊರಕಿದು ಮುಖ್ಯ ಮಂತ್ರಿಗಳಿಗೆ ತಾಲ್ಲೂಕಿನ ಬಸವ ಬಳಗ ಅಧ್ಯಕ್ಷರು ಪ್ರಕಾಶ ಘುಳೆ ಇವರು ಅಭಿನಂದನೆಗಳು ತಿಳಿಸಿದರು.

ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವAಥ ಮಠ. ಇವನಾರು, ಇವನಾರು? ಎಂದು ಕೆಳದೇ ಎಲ್ಲರೂ ನಮ್ಮವರೆನ್ನುವ ಮಠ, ಬಡವರಿಗೆ, ದೀನರಿಗೆ, ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ ಎಂದರು.

ಈ ವೇಳೆ ಶರಣಪ್ಪಾ ಪಂಚಾಕ್ಷರೆ ಪ್ರಥಮ ದರ್ಜೆ ಗುತ್ತಿಗೆದಾರರು ಮಾತನಾಡಿ, ಭಾಲ್ಕಿ ಡಾ. ಬಸವಲಿಂಗ ಪಟ್ಟದೇವರು ಬಸವ ರಾಷ್ಟ್ರೀಯ ಪ್ರಶಸ್ತಿ ದೊರಕಿದ್ದು ಬಸವ ಭಕ್ತರಿಗೆ ಸಂತೋಷ ತಂದಿದೆ ಎಂದರು.

Related