ಕಳೆದ ವರ್ಷ ಜು.6 ರೋಹಿತ್ ಶರ್ಮಾ ಪಾಲಿಗೆ ಸುದಿನ

ಕಳೆದ ವರ್ಷ ಜು.6 ರೋಹಿತ್ ಶರ್ಮಾ ಪಾಲಿಗೆ ಸುದಿನ

ನವದೆಹಲಿ: ಜುಲೈ 6 ಭಾರತ ತಂಡದ ಕ್ರಿಕೆಟಿಗ ರೋಹಿತ್ ಶರ್ಮಾ ಅವರ ಪಾಲಿಗೆ ಸುದಿನ. ಏಕೆಂದರೆ 2019 ಜುಲೈ 6ರಂದು ಐದನೇ ಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾದರು.

2019 ರ ವಿಶ್ವಕಪ್‍ನಲ್ಲಿ ರೋಹಿತ್ ಶರ್ಮಾ ಒಂದೇ ಸರಣಿಯಲ್ಲಿ ಐದಿ ಶತಕಗಳನ್ನು ಬಾರಿಸಿ 648 ರನ್‍ಗಳನ್ನು ಕಲೆ ಹಾಕಿದ್ದರು.

ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ಈ ದೇಶಗಳ ವಿರುದ್ಧ ಶತಕ ಬಾರಿಸಿ ಜುಲೈ 6ರನ್ನು ಅಚ್ಚಳಿಯದ ದಿನವನ್ನಾಗಿ ಮಾಡಿದ್ದಲ್ಲದೇ ಭಾರತೀಯರು ಹೆಮ್ಮೆ ಪಡುವಂತೆ ಆಟವಾಡಿ ಎಲ್ಲರ ಮನ ಗೆದ್ದರು.

ವಿಶ್ವಕಪ್ ಸರಣಿಯಲ್ಲಿ ಶ್ರೀಲಂಕಾದ ಕ್ರಿಕೆಟಿಗ ಕುಮಾರ್ ಸಂಗಕ್ಕರ ಅವರು ನಾಲ್ಕು ಶತಕ ಬಾರಿಸಿದ್ದರು. ಇವರ ದಾಖಲೆಯನ್ನು ಮುರಿದ ರೋಹಿತ್ ಶರ್ಮಾ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದರು.

Related