ಭಾರತ-ವೆಸ್ಟ್ ಇಂಡೀಸ್ ಹೈವೋಲ್ಟೇಜ್ 4ನೇ ಟಿ20 ಪಂದ್ಯ

  • In Sports
  • August 10, 2023
  • 194 Views
ಭಾರತ-ವೆಸ್ಟ್ ಇಂಡೀಸ್ ಹೈವೋಲ್ಟೇಜ್ 4ನೇ ಟಿ20 ಪಂದ್ಯ

ಫ್ಲೋರಿಡಾ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ 4ನೇ ಟಿ20 ಪಂದ್ಯ ಆಗಸ್ಟ್ 12 ಶನಿವಾರದಂದು ನಡೆಯಲಿದೆ. ಇದನ್ನು ಫ್ಲೋರಿಡಾದ ಸೆಂಟ್ರಲ್ ಬ್ರೊವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ವೆಸ್ಟ್ ಇಂಡೀಸ್ ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶಪಡಿಸಿ ಐತಿಹಾಸಿಕ ಸಾಧನೆ ಮಾಡಲಿದೆ. ಹೀಗಾಗಿ ನಾಲ್ಕನೇ ಟಿ20 ಪಂದ್ಯದ ಮೇಲೆ ಎಲ್ಲರ ಕಣ್ಣಿದ್ದು, ಉಭಯ ತಂಡಗಳಿಗೆ ಗೆಲುವು ಅನಿವಾರ್ಯ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಈಗಾಗಲೇ ನಡೆದಿರುವ ಮೂರು ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 1-2 ರ ಹಿನ್ನಡೆಯಲ್ಲಿದ್ದು, ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಿದೆ.

ಭಾರತ-ವೆಸ್ಟ್ ಇಂಡೀಸ್ ನಡುವಣ 4ನೇ ಟಿ20 ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ.

ವರದಿಗಾರ.

ಕೋಲಾರರೆಡ್ಡಿ

Related