ಚೀನಾ ಉದ್ಯಮಗಳ ಮೇಲೆ ಭಾರತ ನಿಷೇಧ!

ಚೀನಾ ಉದ್ಯಮಗಳ ಮೇಲೆ ಭಾರತ ನಿಷೇಧ!

ಬೆಂಗಳೂರು: ಚೀನಾ ದೇಶದೊಂದಿಗಿನ ಗಡಿ ವಿಚಾರದಲ್ಲಿ ಹಳಸಿರುವ ಸಂಬಂಧದಿಂದ ಹಲವು ಉದ್ಯಮಗಳ ಮೇಲೆ ಭಾರತ ಈಗಾಗಲೇ ನಿಷೇಧ ಹೇರಿದೆ. ಇದೀಗ ಚಿಕ್ಕಮಕ್ಕಳು ಆಟವಾಡುವ ಆಟಿಕೆಗಳ ಮೇಲೆ ಸಹ ಪರಿಣಾಮ ಬೀರುತ್ತಿದೆ.

ಚೀನಾದ ಎಲೆಕ್ಟ್ರಾನಿಕ್ಸ್ ಆಟಿಕೆಗಳ ಮೇಲೆ ಶೇ.60ರಷ್ಟು ಆಮದು ಸುಂಕ ವಿಧಿಸಿದ್ದು, ಅಲ್ಲದೆ ಭಾರತದ ಗುಣಮಟ್ಟ ಪ್ರಮಾಣಪತ್ರ ವಿಭಾಗದಿಂದ ಸೆ.1ರೊಳಗೆ ಕಡ್ಡಾಯವಾಗಿ ಸರ್ಟಿಫಿಕೇಟ್ ಪಡೆಯಬೇಕೆಂದು ಚೀನಾ ದೇಶದ ಆಟಿಕೆ ಕಂಪೆನಿಗಳ ಮೇಲೆ ಪರಿಣಾಮ ಬೀರಲಿದೆ.

ವಾಣಿಜ್ಯ ಸಚಿವಾಲಯ ಹೊರಡಿಸಿರುವ ಆಟಿಕೆಗಳ(ಗುಣಮಟ್ಟ ನಿಯಂತ್ರಣ) ಆದೇಶ 2020ರ ದೇಶ ಮತ್ತು ವಿದೇಶ ಆಟಿಕೆ ಉತ್ಪಾದಕ ಕಂಪೆನಿಗಳ ಮೇಲೆ ಪರಿಣಾಮ ಬೀರಲಿದೆ. ಬೆಂಗಳೂರು ನಗರದಲ್ಲಿ ಸುಮಾರು ಸಾವಿರ ಸಣ್ಣ ಮತ್ತು ದೊಡ್ಡ ಆಟಿಕೆ ಕಂಪೆನಿಗಳಿವೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕರ್ನಾಟಕ ಆಟಿಕೆಗಳ ಒಕ್ಕೂಟ ಅಧ್ಯಕ್ಷ ಮಂಗಲ್ ಚಂದ್ ಜೈನ್, ಭಾರತದ ಎಲೆಕ್ಟ್ರಾನಿಕ್ ಆಟಿಕೆಗಳ ಮಾರುಕಟ್ಟೆಯಲ್ಲಿ ಚೀನಾ ಕಂಪೆನಿಗಳ ಪಾರುಪತ್ಯವನ್ನು ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.

Related