ಸ್ವಾತಂತ್ರ್ಯ ದಿನ : ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ

ಸ್ವಾತಂತ್ರ್ಯ ದಿನ : ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ

ಹಗರಿಬೊಮ್ಮನಹಳ್ಳಿ : ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ವರ್ಷ ಇರುತ್ತದೆ ಸಾಂಸ್ಕೃತಿಕ ಕಾರ್ಯಕ್ರಮಗಳಾಗಲಿ ಮಕ್ಕಳ ಸಾಮೂಹಿಕ ನೃತ್ಯ ಪ್ರದರ್ಶನಗಳಾಗಲಿ ಇರುವುದಿಲ್ಲ ಎಂದು ಶಾಸಕ ಭೀಮನಾಯ್ಕ್ ತಿಳಿಸಿದರು.

ತಾ.ಪಂ. ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನೋತ್ಸವ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಶಾಸಕ ಭೀಮನಾಯ್ಕ್ ದೇಶದ ಇತಿಹಾಸದ 74 ವರ್ಷಗಳಲ್ಲಿ ಇಂತಹ ದುಸ್ಥಿತಿ ಎಂದು ಕಂಡಿರಲಿಲ್ಲ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೊರೋನಾ ಆತಂಕ ಪರಿಸ್ಥಿತಿ ಹಿನ್ನಲೆಯಲ್ಲಿ ಸ್ವಾತಂತ್ರ್ಯ ದಿನೋತ್ಸಾವ ಆಚರಿಸಲು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

ಕೊರೋನಾದ ಬಗ್ಗೆ ಮುಂಜಾಗ್ರತೆವಹಿಸಬೇಕಿದೆ ಈ ಬಾರಿ ಪೋಲಿಸ್ ಹಾಗೂ ಹೋಂಗಾಡ್ಸ್ ಅವರಿಂದ ಮಾತ್ರ ಪಥಸಂಚಾಲನಕ್ಕೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾರಿಗೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ ಥರ್ಮಲ್ ಸ್ಕ್ಯಾನಿಂಗ್  ತಪಾಸಣೆ ಸಹ ಮಾಡಲಾಗುತ್ತದೆ.

Related