ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ : ಸಿಎಂ

ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ : ಸಿಎಂ

ಬೆಂಗಳೂರು : ಬಿಜಿಎಸ್ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಿದ್ದು ಖುಷಿ ತಂದಿದೆ. ಮೈಸೂರು ಹಸಿರು ಪ್ರತಿಷ್ಠಾನದಿಂದ 2000 ಗಿಡಗಳನ್ನ ನೆಡಲಾಗಿದೆ. ಈ ಕಾರಣದಿಂದ ನಿರ್ಮಲಾನಂದ ಶ್ರೀಗಳು, ಪ್ರಕಾಶ್ ಸ್ವಾಮೀಜಿ ಅವರಿಗೆ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬಿಜಿಎಸ್ ಆಸ್ಪತ್ರೆ ವತಿಯಿಂದ ಆಕ್ಸಿಜನ್, ಐಸಿಯು, ಸಾಮಾನ್ಯ ಬೆಡ್ ವ್ಯವಸ್ಥೆ ಮಾಡಲಾಗಿದೆ. ನಾಡಿನ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆ ಮಾಡಲಾಗಿದೆ. ಜಾತ್ಯಾತೀತವಾಗಿ ಶಿಕ್ಷಣ ಬಾಗಿಲು ತೆರೆದಿದೆ. ಉನ್ನತ ಶಿಕ್ಷಣ ಜೊತೆಗೆ ಆಧುನಿಕತೆಯನ್ನ ಹೊಂದಿದೆ. ಕಡು ಬಡವರಿಗೂ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಬಿಜಿಎಸ್ ಸಂಸ್ಥೆ ಸರ್ಕಾರದೊಂದಿಗೆ ಸಹಕಾರ ನೀಡಿದೆ.

ಕಳೆದ ಮೂರು ವರ್ಷದಿಂದ ಹಸಿರು ಪ್ರತಿಷ್ಠಾನ ಕೆಲಸ ಮಾಡ್ತಿದೆ. ಸಾಮೂಹಿಕವಾಗಿ ಗಿಡಗಳನ್ನ ನೆಡಲಾಗ್ತಿದೆ. ಮನು ಕುಲದ ಒಳಿತಿಗೆ ಉತ್ತಮ ಕೆಲಸ ಮಾಡುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯ. ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಎಲ್ಲರಿಗೂ ಮಾದರಿಯಾಗಲಿ ಎಂದಿದ್ದಾರೆ.

ಈ ವೇಳೆ ಕೆಲಸ ಮಾಡ್ತಿರೋ ಆರೋಗ್ಯ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದರು.

Related