ಮಹಾನಗರದಲ್ಲಿ ಪಾದಚಾರಿ ಮಾರ್ಗಗಳು ಕಿತ್ತು ಹಾಳಗಿದ್ದರು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ!

ಮಹಾನಗರದಲ್ಲಿ ಪಾದಚಾರಿ ಮಾರ್ಗಗಳು ಕಿತ್ತು ಹಾಳಗಿದ್ದರು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ!

ಬೆಂಗಳೂರು: ಬೃಹತ ಬೆಂಗಳೂರು ಮಹಾನಗರ ಪಾಲಿಕೆಯ ಹೋಸೂರು ರಸ್ತೆ, ಆಡುಗೋಡಿ ಮತ್ತು ಅನೇಕ ಕಡೆಗಳಲ್ಲಿ ಪಾದಚಾರಿ ಮಾರ್ಗಗಳು ಕಿತ್ತು ಹಾಳಗಿದ್ದರು ಸಂಬಂಧ ಪಟ್ಟ ಅಧಿಕಾರಿಗಳು ಅಥವಾ ಜನ ಪ್ರತಿನಿಧಿಗಳು ಮೌನವಹಿಸಿರುವುದು ಕಂಡುಬರುತ್ತಿದೆ. ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡಿರುವ ಗುತ್ತಿಗೆದಾರರು ಕಳಪೆ ಗುಣಮಟ್ಟದಿಂದ ಕೆಲಸ ನಿರ್ವಹಣೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳು ಸ್ಮಾರ್ಟ ಸಿಟಿ ಯೋಜನೆ ಅಥವಾ ಅಮೃತ ನಗರ ಯೋಜನೆಯಲ್ಲಿ ನಿರ್ಮಾಣಗೊಂಡಿವೆ. ನಿರ್ಮಾಣಗೊಂಡ ಕೆಲವೆ ದಿನಗಳಲ್ಲಿ ಕಿತ್ತು ಹಾಳಗುತ್ತಿವೆ. ಈ ರೀತಿಯಾ ಕಾಮಗಾರಿ ಮಾಡಿರುವುದನ್ನು ಅಧಿಕಾರಿಗಳು ಕಾಲ ಕಾಲಕ್ಕೆ ತಾಂತ್ರಿಕವಾಗಿ ಪರಿಶಿಲಿಸಿ ನ್ಯೂನತೆ ಮತ್ತು ಗುಣಮಟ್ಟವನ್ನು ಪರಿಶೀಲಿಸುವುದು ಅಧಿಕಾರಿಗಳ ಜವಬ್ದಾರಿ. ಅದರೆ ಅಧಿಕಾರಿಗಳು ರಾಜಕರಣಿಗಳು ಕಣ್ಣುಮುಚ್ಚಿ ಕುಳಿತಿರುವುದು ಮತ್ತು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ವಹಿಸದೆ ಇರುವುದು ಕಂಡುಬರುತ್ತಿದೆ.

ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ನಿಯಮ ಇದ್ದರು, ಅಧಿಕಾರಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಧಿಗಳು ಕ್ರಮ ಜರುಗಿಸಿ ಹಾಳಗಿರುವ ಪಾದಚಾರಿ ಮಾರ್ಗಗಳನ್ನು ಸರಿಪಡಿಸಿ, ಹಾಗೇ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ವರದಿಗಾರ: ಸ್ವಾಮಿ ಕಾರಿಗನೂರು

Related