ಗಂಗೆಯಲ್ಲಿ ಮಿಂದೆದ್ದ  ಜಾಂಟಿ ರೋಡ್ಸ್‌

  ಗಂಗೆಯಲ್ಲಿ ಮಿಂದೆದ್ದ  ಜಾಂಟಿ ರೋಡ್ಸ್‌

ನವದೆಹಲಿ,  ಮಾ.06 : ಭಾರತದ ಮೇಲಿನ ಅಪಾರ ಪ್ರೀತಿಯ ಪ್ರತೀಕವಾಗಿ ತಮ್ಮ ಮಗಳಿಗೆ ಇಂಡಿಯಾ ಎಂದೇ ಹೆಸರಿಟ್ಟಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌, ಇದೀಗ ಹೃಷಿಕೇಶ್‌ದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ಗಮನ ಸೆಳೆದಿದ್ದಾರೆ.

ಹೃಷಿಕೇಶ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ಹಬ್ಬಕ್ಕೆ ಆಗಮಿಸಿದ್ದ ವೇಳೆ ಜಾಂಟಿ ರೋಡ್ಸ್‌ ಗಂಗಾ ನದಿಗೂ ಭೇಟಿ ನೀಡಿದ್ದಾರೆ. ಮೊದಲೇ ಭಾರತ ನೆಲ, ಇಲ್ಲಿನ ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಜಾಂಟಿ ರೋಡ್ಸ್‌ ಖುಷಿಯಿಂದಲೇ ನದಿಯಲ್ಲಿ ಸ್ನಾನ ಮಾಡಿ ಸಾರ್ಥಕತೆಯ ಖುಷಿ ಅನುಭವಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಖ್ಯಾತ ಕ್ರಿಕೆಟಿಗ ಹರ್ಭಜನ್‌ ಸಿಂಗ್‌, “ಮುಂದಿನ ಬಾರಿ ಹೋದಾಗ ನನ್ನನ್ನೂ ಕರೆದುಕೊಂಡು ಹೋಗಿ’ ಎಂದು ಟ್ವೀಟ್‌ ಮಾಡಿ ಪ್ರತಿಕ್ರಿಯಿಸಿದ್ದಾರೆ. ಗಂಗೆಯಲ್ಲಿ ಮಿಂದರೆ ಜನ್ಮಜನ್ಮದ ಪಾಪಗಳೆಲ್ಲ ತೊಳೆದು

ಹೋಗುವುದು ಎಂಬ ನಂಬಿಕೆ ಕೋಟ್ಯಂತರ ಹಿಂದೂ ಧರ್ಮೀಯರಲ್ಲಿದೆ.

 

Related