ರೂಪೇನ ಅಗ್ರಹಾರ ಜೀರ್ಣೋದ್ದಾರ ಕಾರ್ಯಕ್ರಮದಲ್ಲಿ ಆರ್. ಅಶೋಕ್ ಭಾಗಿ

ರೂಪೇನ ಅಗ್ರಹಾರ ಜೀರ್ಣೋದ್ದಾರ ಕಾರ್ಯಕ್ರಮದಲ್ಲಿ ಆರ್. ಅಶೋಕ್ ಭಾಗಿ

ಬೊಮ್ಮನಹಳ್ಳಿ: ಅಯೋಧ್ಯೆಯಲ್ಲಿಂದು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಕರ್ನಾಟಕ ರಾಜ್ಯದಲ್ಲೂ ವಿವಿಧ ದೇವಾಲಯಗಳು ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಇನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ರೂಪೇನ ಅಗ್ರಹಾರ ಗ್ರಾಮದಲ್ಲಿರುವಂತಹ ಶ್ರೀ ಲಕ್ಷ್ಮೀ ವೆಂಕಟೇಶ್ಚರ, ವೀರಾಂಜನೇಯ, ಮಹಾಗಣಪತಿ, ವೇದಮಾತಾ ಗಾಯತ್ರಿ, ಶ್ರೀ ಸರ್ವಾಭೀಷ್ಟ, ಶನೇಶ್ವರಸ್ವಾಮಿ, ಆದಿತ್ಯಾದಿ ನವಗ್ರಹ ನಾಗದೇವತೆ ಮತ್ತು ರಾಜಗೋಪುರ ಧ್ವಜಸ್ತಂಭ, ವಿಮಾನಗೋಪುರಗಳ ಜೀರ್ಣೋದ್ದಾರ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ರಾಜ್ಯದ ವಿಪಕ್ಷ ನಾಯಕರಾಗಿರುವಂತಹ‌ ಆರ್. ಅಶೋಕ್ ಅವರು ಭಾಗಿಯಾಗಿದ್ದರು. ಇನ್ನು ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೇಸ್ ನವರಿಗೆ ರಾಮನನ್ನು ಕಂಡ್ರೇ ಆಗಲ್ಲವೆಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದವರಿಗೆ ಶ್ರೀ ರಾಮನನ್ನು ಕಂಡರೆ ಆಗುವುದಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದರು ಎಂದು ಹೇಳಿದರು. ಶ್ರೀ ರಾಮನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಶ್ರೀ ರಾಮನ ಬ್ಯಾನರ್ಗಳಲ್ಲಿ ತಮ್ಮ ಭಾವಚಿತ್ರಗಳನ್ನು ಅಳವಡಿಸಿಕೊಂಡಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಗೆಂದು ದೇಶದಲ್ಲಿರುವ ಹಿಂದೂ ಜನಾಂಗಗಳು ಬಹಳ ಕಾತುರದಿಂದ ಕಾಯುತ್ತಿದ್ದ ಈ ಕ್ಷಣ ಇಂದು ನಮ್ಮದಾಗಿದೆ ಎಂದು ಹೇಳಿದರು.

ಇನ್ನು ಐತಿಹಾಸಿಕ ರಾಮಮಂದಿರ ಉದ್ಘಾಟನೆಯ ದಿನದಂದು ಕಾಂಗ್ರೆಸ್ ಪಕ್ಷ ಕರ್ನಾಟಕದ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ರಜೆ ನಡೆದಿದ್ದ ಕಾರಣ ಆರ್ ಅಶೋಕ್ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂಭಾಬೀಷೇಕ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿಸೂರ್ಯ, ಶಾಸಕ.ಸತೀಶ್ ರೆಡ್ಡಿ ಸೇರಿದಂತೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮುಖಂಡರುಗಳು ಮತ್ತು ಭಕ್ತಾದಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು

 

 

Related