ಮಧ್ಯಪ್ರದೇಶದಲ್ಲಿ ರೈಲುಗಳ ಮುಖಾಮುಖಿ

ಮಧ್ಯಪ್ರದೇಶದಲ್ಲಿ ರೈಲುಗಳ ಮುಖಾಮುಖಿ

ಭೋಪಾಲ್, ಮಾ.1 : ಮಧ್ಯಪ್ರದೇಶದಲ್ಲಿ ಎರಡು ಸರಕು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಮಧ್ಯಪ್ರದೇಶದ ಸಿಂಗ್ರೌಳಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಎರಡು ರೈಲುಗಳು ಒಂದೇ ಹಳಿಯಲ್ಲಿ ಬಂದಿದ್ದರಿಂದ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಒಂದು ರೈಲಿನಲ್ಲಿ ಕಲ್ಲಿದ್ದಲನ್ನು ತುಂಬಲಾಗಿತ್ತು. ಮತ್ತೊಂದು ರೈಲು ಖಾಲಿ ತೆರಳುತ್ತಿತ್ತು. ರೈಲು ಡಿಕ್ಕಿ ಹೊಡೆದ ರಭಸಕ್ಕೆ ರೈಲು ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Related