ಚಾಮುಂಡಿ ಬೆಟ್ಟದ ನಂದಿಯಲ್ಲಿ ಬಿರುಕು!

ಚಾಮುಂಡಿ ಬೆಟ್ಟದ ನಂದಿಯಲ್ಲಿ ಬಿರುಕು!

ಮೈಸೂರು,ಫೆ.19 : ಮೈಸೂರು ಸಾಂಸ್ಕೃತಿಕ ನಗರಿ. ಅರಮನೆ, ಚಾಮುಂಡಿ ಬೆಟ್ಟ, ಕೆಆರ್ಎಸ್ ಡ್ಯಾಂ ಹೀಗೆ ಮೈಸೂರಿನ ಸೊಬಗನ್ನು ಹೆಚ್ಚಿಸುವ ಸಾಕಷ್ಟು ತಾಣಗಳು ಇಲ್ಲಿವೆ. ಮೈಸೂರಿಗೆ ಕಲಶದಂತಿದ್ದ ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಈಗ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. 400 ವರ್ಷಗಳ ಹಿಂದೆ ನಂದಿ ವಿಗ್ರಹ ನಿರ್ಮಾಣ ಮಾಡಲಾಗಿತ್ತು. ಇದು ಚಾಮುಂಡಿ ಬೆಟ್ಟದ ಪ್ರಮುಖ ಕೇಂದ್ರ ಬಿಂದು. ಆದರೆ, ವಿಗ್ರಹದ ಕಾಲು, ಕುತ್ತಿಗೆ, ಮುಖದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

Related