ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ

ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ

ಮುಂಡಗೋಡ : ಈ ಬಾರಿ ಗಜಾನನೋತ್ಸವವನ್ನು ಅತಿ ಸರಳ ರೀತಿಯಿಂದ ಆಚರಿಸಬೇಕು. ಒಂದು ವೇಳೆ ಏನಾದರೂ ಅವಘಡಗಳು ನಡೆದರೇ, ಸಮಿತಿಯೇ ನೇರ ಹೊಣೆ ಹೊರಬೇಕಾಗುತ್ತದೆ ಹಾಗೂ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ತಹಸೀಲ್ದಾರ ಶ್ರೀಧರ ಮುಂದಲಮನಿ ನುಡಿದರು.

ಪಟ್ಟಣದ ಮಿನಿ ವಿಧಾನಸೌದ ಸಭಾಂಗಣದಲ್ಲಿ ಗಣೇಶಚತುರ್ಥಿ ಆಚರಣೆ ಪೂರ್ವಭಾವಿಯಾಗಿ ಕರೆಯಲಾದ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಗಣೇಶೋತ್ಸವ ಸಮಿತಿ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್-19 ಇರುವುದರಿಂದ ಪ್ರಸಕ್ತ ಸಾಲಿನ ಗಜಾನನೋತ್ಸವದಲ್ಲಿ ಗುಂಪು ಗುಂಪಾಗಿ ಸೇರದೆ ಆಡಂಬರ ಪ್ರದರ್ಶಿಸದೆ ಸರಳವಾಗಿ ಆಚರಿಸಬೇಕಿದೆ.

ಮೆರವಣಿಗೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರವನ್ನು ಹಮ್ಮಿಕೊಳ್ಳುವಂತಿಲ್ಲ. ಶಾಂತಿ ಪಾಲನೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸ್ಯಾನಿಟೈಜಿಂಗ್ ಕೂಡ ಅಷ್ಟೇ ಮುಖ್ಯವಾಗಿದ್ದು, ಯಾವುದೇ ರೀತಿ ತೊಂದರೆಯಾಗದAತೆ ನೋಡಿಕೊಳ್ಳುವುದು, ಸರ್ಕಾರದ ಆದೇಶ ಪಾಲಿಸುವುದು, ಗಜಾನನೋತ್ಸವ ಸಮಿತಿಯ ಜವಾಬ್ದಾರಿಯಾಗಿದೆ.ಅದೇರೀತಿ ಸಾರ್ವಜನಿಕರುಕೂಡ ಈ ಬಾರಿ ಸರಳ ರೀತಿಯಿಂದ ಹಬ್ಬವನ್ನುಆಚರಿಸಬೇಕುಎಂದು ಮನವಿ ಮಾಡಿದರು.

Related