ಮನೆಯಲ್ಲಿ ಈ ದಿಕ್ಕಿನಲ್ಲಿ ಮನಿ ಪ್ಲ್ಯಾಂಟ್ ಗಿಡ ಇದ್ದರೆ ಉತ್ತಮ

  • In State
  • March 21, 2020
  • 296 Views
ಮನೆಯಲ್ಲಿ ಈ ದಿಕ್ಕಿನಲ್ಲಿ ಮನಿ ಪ್ಲ್ಯಾಂಟ್ ಗಿಡ ಇದ್ದರೆ ಉತ್ತಮ

ಬೆಂಗಳೂರು, ಮಾ. 21: ಸಾಮಾನ್ಯವಾಗಿ ಎಲ್ಲರೂ ತಮ್ಮ ಮನೆಯ ಸುತ್ತ ಮುತ್ತ ಸುಂದರವಾಗಿ ಇರಬೇಕೆಂದು ವಿವಿಧ ರೀತಿಯ ಗಿಡಮರಗಳನ್ನು ಬೆಳೆಸುತ್ತಾರೆ ಅದರಲ್ಲಿ ಮನಿಪ್ಲಾಂಟ್ ಅನ್ನು ಸಹ ಬೆಳೆಸುತ್ತಾರೆ  ಈ ಮನಿಪ್ಲಾಂಟ್ ಅನ್ನು ಯಾವ ದಿಕ್ಕಿನಲ್ಲಿ ಬೆಳೆಸಿದರೆ ಒಳ್ಳೆಯದು ಎಂದು ತಿಳಿದುಕೊಳ್ಳೋಣ.

ಮನಿ ಪ್ಲ್ಯಾಂಟ್ ಗಿಡ ಮನೆಯಲ್ಲಿದ್ದರೆ ತುಂಬಾನೇ ಉತ್ತಮ ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಸಮೃದ್ಧಿ, ಶಾಂತಿ, ಸಂಪತ್ತು ಹೆಚ್ಚುತ್ತದೆ. ಇದು ಯಾವ ದಿಕ್ಕಿನಲ್ಲಿ ಇದ್ದರೆ ಉತ್ತಮ? ಮೊದಲಾದ ಬಹು ಮುಖ್ಯ ಮಾಹಿತಿಯನ್ನು ನೀವು ತಿಳಿದುಕೊಲ್ಲಿ…

ಮನಿ ಪ್ಲಾಂಟ್ ಸಮೃದ್ಧಿಯ ಸಂಕೇತವಾಗಿದೆ. ಇದನ್ನು ಮೇಲಕ್ಕೆ ಏರುವಂತೆ ಬೆಳೆಸಲಾಗುತ್ತದೆ. ನೆಲದ ಮೇಲೆ ಬೆಳೆದ ಮನಿ ಪ್ಲಾಂಟ್ ವಾಸ್ತು ದೋಷ ಹೆಚ್ಚಿಸುತ್ತದೆ.

ಮನಿ ಪ್ಲಾಂಟ್ ಗಿಡವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಬೆಳೆಸಿ. ಇದರಿಂದ ಹಣ ವೃದ್ಧಿಯಾಗುತ್ತದೆ. ಅಲ್ಲದೆ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ.

ಮನಿ ಪ್ಲಾಂಟ್ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿ ಯಾಕೆ ನೆಡಬೇಕು ಎಂದರೆ ಆ ದಿಕ್ಕಿನಲ್ಲಿ ಶುಕ್ರ ದೇವನ ಅದಿಪತ್ಯವಿದೆ. ಶುಕ್ರ ಗ್ರಹದ ಜಾಗದಲ್ಲಿ ಮನಿ ಪ್ಲಾಂಟ್ ಗಿಡ ನೆಟ್ಟರೆ ಶುಭ ಎಂದು ಹೇಳಲಾಗುತ್ತದೆ.

ಮನಿ ಪ್ಲಾಂಟ್ ನ್ನು ಹೆಚ್ಚು ಬೆಳಕು ಇರುವ ಜಾಗದಲ್ಲಿ ಬೆಳೆಸಬೇಡಿ. ಇದನ್ನು ಮನೆಯಲ್ಲಿ ಸಹ ಬೆಳೆಸಲಾಗುತ್ತದೆ. ಮನಿ ಪ್ಲಾಂಟ್ ನ್ನು ನೀರಿನಲ್ಲಿ ಇಟ್ಟರೆ ಉತ್ತಮ. ಇದರ ನೀರನ್ನು ಪ್ರತಿ ವಾರ ಬದಲಾಯಿಸಬೇಕು.

 

Related