ಐಡಿಪಿಎಸ್ ಯೋಜನೆ ದುರ್ಬಳಕೆ: ಕ್ರಮಕ್ಕೆ ಆಗ್ರಹ

ಐಡಿಪಿಎಸ್ ಯೋಜನೆ ದುರ್ಬಳಕೆ: ಕ್ರಮಕ್ಕೆ ಆಗ್ರಹ

ಲಿಂಗಸುಗೂರು : ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್ ಸ್ಕೀಮ್‌ನ್ನು ದುರ್ಬಳಕೆ ಮಾಡಿಕೊಂಡ ಜೆಸ್ಕಾಂ ಅಧಿಕಾರಿ ಹಾಗೂ ಗುತ್ತಿದಾರರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಸಹಾಯಕ ಆಯುಕ್ತರ ಮೂಲಕ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಲಿಂಗಸುಗೂರು, ಮುದಗಲ್, ಹಟ್ಟಿ ಉಪ ವಿಭಾಗಗಳಲ್ಲಿ ಸಿಂಗಲ್ ಲೈನ್ ಡೈಯಾಗ್ರಾಮ ಪ್ರಕಾರ ಗುತ್ತಿಗೆದಾರ ಸಾಮಾಗ್ರಿಗಳನ್ನು ಪೂರೈಸಿ ಬಿಲ್ ಸರ್ಕಾರದ ನಿಯಮ ಉಲ್ಲಂಘಿಸಿ ಬಿಲ್ ಪಾವತಿಸಿಕೊಂಡಿದ್ದಾರೆ. ಅಲ್ಲದೇ ಸಾಮಾಗ್ರಿಗಳನ್ನು ಉದ್ದೇಶಿತ ಕಾಮಗಾರಿಗೆ ಬಳಸದೇ ಪ್ರತಿಷ್ಠಿತ ಬಡವಾಣೆಗಳ ಕೆಲಸಕ್ಕೆ ಬಳಸಿಕೊಂಡಿದ್ದಾರೆ.

ಉದ್ದೇಶಿತ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಉನ್ನತ ಮಟ್ಟದ ತನಿಖೆ ಮಾಡಬೇಕು. ಹಾಗೂ ಅಂತಿಮ ಬಿಲ್ ಪಾವತಿ ತಡೆಹಿಡಿಯಬೇಕು. ಯೋಜನೆಯ ನಿಯಮ ಉಲ್ಲಂಘಿಸಿ ಹಣ ದುರ್ಬಳಕೆ ಮಾಡಿಕೊಂಡ ಅಧಿಕಾರಿ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

Related