ರಾಜ್ಯದ ರೈತರಿಗೆ ಸಹಾಯ ಮಾಡಿದರೆ ನಾನು ಸಿಎಂಗೆ ಆಭಾರಿಯಾಗಿರುತ್ತೇನೆ: ದೇವೇಗೌಡ!

ರಾಜ್ಯದ ರೈತರಿಗೆ ಸಹಾಯ ಮಾಡಿದರೆ ನಾನು ಸಿಎಂಗೆ ಆಭಾರಿಯಾಗಿರುತ್ತೇನೆ: ದೇವೇಗೌಡ!

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನೈಸ್ ರಸ್ತೆಗಳಿಂದ ರಾಜ್ಯದಲ್ಲಿರುವ ಬಡ ರೈತರ ಜಮೀನುಗಳು ಹಾಳಾಗುತ್ತಿದೆ ಇದರಿಂದ ರೈತರಿಗೆ ಸಂಕಷ್ಟ ಬಂದೊದಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಅವರು, ರೈತರ ಜಮೀನನ್ನು ಉಳಿಸಿಕೊಟ್ಟರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ ಎಂದು ಹೇಳಿದರು. ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ನೇಮಕ‌ ಮಾಡಿ, ಪ್ರಾಜೆಕ್ಟ್‌ಅನ್ನು ಸರ್ಕಾರ ತೆಗೆದುಕೊಳ್ಳಬೇಕು. ಅಕ್ರಮಗಳನ್ನು ಸರಿಪಡಿಸಬೇಕು” ಎಂದು ಆಗ್ರಹಿಸಿದರು.

ರಾಜ್ಯಸರ್ಕಾರ ಈವರೆಗೆ ಯಾವುದೇ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ, ವಿಳಂಬವಾಗಿದೆ. ನೈಸ್ ಅಕ್ರಮದ ವಿರುದ್ದ ನಮ್ಮ ಪಕ್ಷ ಧ್ವನಿ ಎತ್ತಿದೆ. ವಿಧಾನಸಭೆಯಲ್ಲೂ ಸುದೀರ್ಘವಾಗಿ ಚರ್ಚೆಯಾಗಿದೆ. ಸೋನಿಯಾ ಗಾಂಧಿಯವರ ಜೊತೆ ಕೂಡ ಚರ್ಚೆ ಮಾಡಲಾಗಿತ್ತು. ಅವರು ಮಸ್ಟ್ ಟೇಕ್ ಆಕ್ಷನ್ ಅಂತಾ ಹೇಳಿದ್ದರು” ಎಂದು ದೇವೇಗೌಡ ನೆನಪಿಸಿದರು.

“ನೈಸ್ ರಸ್ತೆಗೆ ಒಳಪಡದೆ ಇರುವ ಭೂಮಿ ಎಷ್ಟಿದೆ ಅಂತಾ ಅಂದಾಜು ಮಾಡಿದಾಗ ವ್ಯಾಲ್ಯೂ ಜಾಸ್ತಿಯಾಗುತ್ತದೆ. ಸಿಎಂ ಸಿದ್ದರಾಮಯ್ಯ ಯಾವಾಗಲೂ ಬಡವರ ಪರ ಎಂದು ಹೇಳುತ್ತಾರೆ.

Related