ನಾನೂ ಕೂಡಾ ರಾಮಭಕ್ತ: ಶಾಸಕ ಇಕ್ಬಾಲ್ ಹುಸೇನ್

ನಾನೂ ಕೂಡಾ ರಾಮಭಕ್ತ: ಶಾಸಕ ಇಕ್ಬಾಲ್ ಹುಸೇನ್

ರಾಮನಗರ: ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಬಗ್ಗೆ ರಾಜ್ಯ ರಾಜಕೀಯದಲ್ಲಿ ಮತ್ತು ಕೇಂದ್ರ ರಾಜಕೀಯದಲ್ಲಿ ಈಗಾಗಲೇ ಹಲವಾರು ಚರ್ಚೆಗಳು ನಡೆಯುತ್ತಿದ್ದು ಇದರ ಬೆನ್ನಲ್ಲೇ ಕಾಂಗ್ರೆಸ್ ನ ಶಾಸಕ ಇಕ್ಬಾಲ್ ಹುಸೈನ್ ಪ್ರತಿಕ್ರಿಯೆ ನೀಡ ಅವರು, ನಾನು ಕೂಡ ರಾಮಭಕ್ತ. ರಾಮ ಮಂದಿರ ವಿಷಯವಾಗಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದು ಬೇಡವೆಂದು ಹೇಳಿದ್ದಾರೆ..

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಚಿಕ್ಕಂದಿನಿಂದಲೂ ಎಲ್ಲಾ ದೇವರನ್ನು ಪೂಜಿಸುತ್ತಾ ಬಂದಿದ್ದೇನೆ ಅದರಂತೆ ರಾಮನನ್ನು ಪೂಜಿಸುತ್ತೇನೆ ಎಂದು ಹೇಳಿದರು. ರಾಮನಗರದಲ್ಲಿ ರಾಮೋತ್ಸವವನ್ನು ಭಕ್ತಿಯಿಂದ ಮಾಡುತ್ತೇವೆ. ನಾನೂ ರಾಮ ಭಕ್ತ ಎಂದು ತಿಳಿಸಿದ್ದಾರೆ.

ರಾಮಮಂದಿರವನ್ನು ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು, ಆದರೆ ನಾವು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಜನರನ್ನು ಒಡೆದು ರಾಜಕೀಯ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಗೆ ತನ್ನದೇ ಬದ್ಧತೆ, ಸಿದ್ಧಾಂತ ಇದೆ, ಬಿಜೆಪಿಯವರಿಗೆ ರಾಮನ ಪೂಜೆ ಹೊಸದಿರಬಹುದು ಆದರೆ ನಮಗೆ ಹೊಸದಲ್ಲ, ಅವರಿಗೆ ಹೊಸದಾದ್ದರಿಂದ ಅದನ್ನೇ ಅವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಇಕ್ಬಾಲ್ ಹೇಳಿದ್ದಾರೆ.

Related