ನಾನು ಎಲ್ಲೆ ಇದ್ದರು ಬಡವರ ಪರವಾಗಿ ಸಚಿವ ನಾಗರಾಜ್

ನಾನು ಎಲ್ಲೆ ಇದ್ದರು ಬಡವರ ಪರವಾಗಿ ಸಚಿವ ನಾಗರಾಜ್

ಹೊಸಕೋಟೆ- ಕಸಬಾ ಹೋಬಳಿಯ ದೂಡ್ಡಹುಲ್ಲೂರು ಗ್ರಾ. ಪಂ. ವ್ಯಾಪ್ತಿಯ ಲಾಲ್‌ಬಾಗ್ ದಾಸರಹಳ್ಳಿ ಗ್ರಾಮದಲ್ಲಿ ಇಂದು 600 ಜನರಿಗೆ ಎಂಟಿಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಲಸಿಕೆ ಮತ್ತು ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿ. ನಾನು ಎಲ್ಲೆ ಇದ್ದುರು ಬಡವರ ಪರವಾಗಿ ಎಲ್ಲಾ ಜಾತಿ ಧರ್ಮಗಳ ಪರ ಎಂದು ಮಾಜಿ ಸಚಿವ ನಾಗರಾಜ್ ಹೇಳಿದರು.
ಕೊರೊನ ಸೋಂಕು ಬಂದ ಮನುಷ್ಯ ಸಾಯಬಹುದು ಅಥವಾ ಬದುಕಬಹುದು. ಈ ದೇಶದಲ್ಲಿ ದೊಡ್ಡ ಕಾಯಿಲೆ ಇದ್ದರೆ ಅದು ಕೊರೋನ ಮಹಮಾರಿ ರೋಗ ಕರ್ನಾಟಕದಲ್ಲಿ ತಡೆಗಟ್ಟಲು ಕೇಂದ್ರದ ಮೋದಿ ಮತ್ತು ಯಡಿಯೂರಪ್ಪ 2 ಕೋಟಿ 40 ಸಾವಿರ ಜನರಿಗೆ ರೋಗ ಮುಕ್ತರನ್ನಾಗಿಸಲು ಲಸಿಕೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ 2ನೇ ಅಲೆಯಲ್ಲಿ 45 ಸಾವಿರ, ತಾಲ್ಲೂಕಿನಲ್ಲಿ 380 ಜನ ಈ ರೋಗದಿಂದ ಸಾವನ್ನಪ್ಪಿದ್ದಾರೆ. ಎಷ್ಟೋ ಜನರು ಮಕ್ಕಳು ತಂದೆ ತಾಯಿಗಳನ್ನು ಕಳೆದುಕೊಂಡ ಅನಾಥರಾಗಿದ್ದಾರೆ. ಇದನ್ನು ನಿಯಂತ್ರಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು ನಾವು ಸಹ ನಮ್ಮ ಸ್ವಂತ ಹಣದಿಂದ 21 ಸಾವಿರ ಉಚಿತ ಲಸಿಕೆ ನೀಡಿದ್ದೇವೆ. 40 ವರ್ಷ ರಾಜಕಾರಣ ಮಾಡಿದವರು ಸರ್ಕಾರಿ ಆಸ್ತಿ, ಸಾರ್ವಜನಿಕರ ಆಸ್ತಿ, ನುಂಗಿದ್ದಾರೆ. ದೇಶಕ್ಕೆ ಸ್ವಾತಂತ್ರ ಬಂದಿದ್ದರು ಹೊಸಕೋಟೆಗೆ ನಾನು ಬಂದ ಮೇಲೆ ಸ್ವಾತಂತ್ರ ಬಂದಿದ್ದು. ಮೂರು ಭಾರಿ ಶಾಸಕನಾಗಿ, ಎರಡು ಭಾರಿ ಮಂತ್ರಿಯಾಗಿ ಅಂಬೇಡ್ಕರ್ ಕೊಟ್ಟ ಸಂವಿಧಾನದಡಿ ಎಲ್ಲಾ ವರ್ಗದ ಜನರಿಗೆ ಮತ್ತು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಕೆ.ಸತೀಶ್, ಬಿಎಂಆರ್ಡಿ ಅಧ್ಯಕ್ಷ ಸಿ.ನಾಗರಾಜ್, ಮಾಜಿ ತಾ.ಪಂ ಅಧ್ಯಕ್ಷ ಜಯದೇವಯ್ಯ,ಗ್ರಾ.ಪಂ ಅಧ್ಯಕ್ಷ ಸುಬ್ಬ ಚಿಕ್ಕನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷ ಅರುಣ್ ಕುಮಾರ್, ಎಸಿ.ಸಿ ಮೋರ್ಚಾ ತಾ.ಅಧ್ಯಕ್ಷ ಕೆ.ನಾಗೇಶ್‌ಬಾಲಚಂದ್ರನ್ ನಿತಿನ್, ತವಟಳ್ಳಿ ರಾಮು, ರಘುವೀರ್, ಗ್ರಾಮ ಪಂ.ಸದಸ್ಯ ಮುನಿರಾಜು, ಸತೀಶ್, ಗ್ರಾಮದ ಮಂಜುನಾಥ್,ವೆAಕಟೇಶ್,ರಮೇಶ್ ಇನ್ನಿತರರು ಇದ್ದರು

Related