ಬೆಂಗಳೂರು: ಗೃಹ ಸಚಿವ ಜಿ ಪರಮೇಶ್ವರವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು ಇದರಿಂದ ಕಾಂಗ್ರೆಸ್ ನಾಯಕರನ್ನ ಬೆಚ್ಚಿಬಿಳಿಸಿದೆ.
ಹೌದು, ಗೃಹ ಸಚಿವ ಜಿ ಪರಮೇಶ್ವರ್ ಅವರ ಮನೆ ಸೇರಿದಂತೆ ಮೂರು ಶಿಕ್ಷಣ ಸಂಸ್ಥೆ ಮೇಲೆ ಇಡಿ ಅಧಿಕಾರಿಗಳು ನಿನ್ನೆ (ಬುಧವಾರ ಮೇ 21) ರಂದು ಧಡೀರ್ ದಾಳಿ ಮಾಡಿದ್ದು ಇದರಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಇನ್ನು ಇಡಿ ದಾಳಿ ಕುರಿತಾಗಿ ಮಾತನಾಡಿದ ಜಿ ಪರಮೇಶ್ವರ್ ಅವರು, ಇಡಿ ದಾಳಿ ಉದ್ದೇಶ ನನಗೆ ಗೊತ್ತಿಲ್ಲ, ನಾನು ಯಾವುದನ್ನು ಮುಚ್ಚಿಟ್ಟಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಯಾವ ಮಾಹಿತಿ ಕೇಳಿದ್ದಾರೆ ಅದನ್ನೆಲ್ಲವನ್ನು ನಮ್ಮ ಸಂಸ್ಥೆಯವರು ನೀಡಿದ್ದಾರೆ. ಇಡಿ ದಾಳಿಯ ಉದ್ದೇಶವೇನಿತ್ತು ಎಂಬುದು ನನಗೆ ಇಲ್ಲಿಯವರೆಗೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕಾರಣಿಗಳೇ ಸ್ವಲ್ಪ ಈ ಕಡೆ ಗಮನಹರಿಸಿ…!
ಇಡಿ ಅವರಿಗೆ ಏನು ಸೂಚನೆ ಬಂದಿದೆಯೋ ಗೊತ್ತಿಲ್ಲ. ಅವರು ಕೇಳಿದ ದಾಖಲೆಗಳನ್ನು ನಾವು ಕೊಡುತ್ತೇವೆ ಎಂದು ತಿಳಿಸಿದರು.
ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ. ಅವರಿಗೆ ಸಹಕಾರ ನೀಡುತ್ತೇನೆ. ನಾನು ಯಾವುದನ್ನು ಮುಚ್ಚಿಟ್ಟಿಲ್ಲ. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ನಾನು ಕಾನೂನಿಗೆ ಗೌರವ ಕೊಡುತ್ತೇನೆ. ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ ಎಂದು ಹೇಳಿದರು.
