ಆಕ್ಸಿಜನ್ ಕೊರತೆಯಿಂದ ಪತ್ನಿ ಎದುರೇ ಪತಿ ಸಾವು

ಆಕ್ಸಿಜನ್ ಕೊರತೆಯಿಂದ ಪತ್ನಿ ಎದುರೇ ಪತಿ ಸಾವು

ಮೈಸೂರು : ನಗರದ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಆಕ್ಸಿಜನ್ ಸಿಗದೆ ಸಾವುನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಶಿವಯ್ಯ ಎಂಬಂತನ್ನು ವ್ಯಕ್ತಿ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ  ಮೈಸೂರಿನ ಅರವಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇನ್ನು ಸ್ವಲ್ಪ ಹೊತ್ತಿನಲ್ಲೇ ಆಕ್ಸಿಜನ್ ಬರುತ್ತೆ ಅಂತಾ ಅಲ್ಲಿನ ವೈದ್ಯರು ಹೇಳುತ್ತಾ ಕಾಲಹರಣ ಮಾಡಿದ ಆರೋಪ ಕೇಳಿ ಬಂದಿದೆ.

ಆಕ್ಸಿಜನ್ ಸಿಗದೇ ತನ್ನ ಪತ್ನಿ ಎದುರೇ ಶಿವಯ್ಯ ಪ್ರಾಣ ಬಿಟ್ಟಿದ್ದಾರೆ. ಇವರು ಬಡವರಾಗಿದ್ದು, ಚಿಕಿತ್ಸೆಗಾಗಿ ಮನೆಯಲ್ಲಿದ್ದ ದನ, ಕುರಿ ಮಾರಿ 70 ಸಾವಿರ ಹಣ ಪಾವತಿ ಮಾಡಲಾಗಿತ್ತು.
ಆದರೂ ಕೂಡ ಸದ್ಯ ಒಂದು ಲಕ್ಷ ಹಣ ನೀಡಿದರೆ ಮಾತ್ರ ಮೃತ ದೇಹವನ್ನು ಕೊಡುವುದಾಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ ಎಂದು ಶಿವಯ್ಯನ ಪತ್ನಿ ನೋವನ್ನು ತೋಡಿಕೊಂಡಿದ್ದಾರೆ.

ಹಣವಿಲ್ಲದೆ ಮೃತ ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಲು ಮೃತನ ಸಂಬಂಧಿಕರು ಮುಂದಾಗಿದ್ದಾರೆ.

Related