ಹುಬ್ಬಳ್ಳಿ ಎರಡು, ವಿಜಯಪುರದ ಒಬ್ಬರಿಗೆ ಕೊರೊನಾ ಸೋಂಕು ಪತ್ತೆ

  • In State
  • April 23, 2020
  • 705 Views
ಹುಬ್ಬಳ್ಳಿ ಎರಡು, ವಿಜಯಪುರದ  ಒಬ್ಬರಿಗೆ ಕೊರೊನಾ ಸೋಂಕು ಪತ್ತೆ

ಹುಬ್ಬಳ್ಳಿ: ನಗರದ ಇಬ್ಬರು ಮಹಿಳೆಯರಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಏ.13 ರಂದು ಸೋಂಕು ದೃಢಪಟ್ಟಿದ್ದ ಪಿ-236 ರ ಸಂಪರ್ಕದಿಂದಾಗಿ ಹುಬ್ಬಳ್ಳಿ ಮುಲ್ಲಾ ಓಣಿಯ 30 ವರ್ಷದ ಮಹಿಳೆ ( ಪಿ-430) ಹಾಗೂ ಕೇಶ್ವಾಪುರದ ಆಜಾದ್ ಕಾಲನಿಯ 13 ವರ್ಷದ ಬಾಲಕಿಯೊಬ್ಬರಲ್ಲಿ ( ಪಿ-431) ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ.

ಇಬ್ಬರಿಗೂ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಇದು ಒಂಬತ್ತನೇ ಪ್ರಕರಣವಾಗಿದೆ. ಅವರಲ್ಲಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಈಗಾಗಲೇ ಬಿಡುಗಡೆಯಾಗಿದ್ದಾರೆ. ಸದ್ಯ ಎಂಟು ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಜಿಲ್ಲಾಧಿಕಾರಿ ತಿಳಿಸಿದರು.

ವೈದ್ಯಕೀಯ ವಿದ್ಯಾರ್ಥಿನಿಗೆ ಸೋಂಕು

ವಿಜಯಪುರ: ಇಲ್ಲಿನ ಬಿಎಲ್ ಡಿಇ ಆಸ್ಪತ್ರೆಯಲ್ಲಿ ಎಂ.ಡಿ ಓದುತ್ತಿರುವ ಯುವತಿಗೆ ಕೊರೊನಾ ಸೋಂಕು ತಗಲಿದೆ. ಸೋಂಕಿತ ಯುವತಿಗೆ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿದೆ.

ಯುವತಿ ಆಂಧ್ರ ಪ್ರದೇಶದವಳಾಗಿದ್ದು, ಆಕೆ ಯಾರಿಗೆಲ್ಲಾ ಚಿಕಿತ್ಸೆ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಮಾಹಿತಿ ನೀಡಿದರು.

Related