ಬಿಸಿ ಊಟ ಬಂದ್ ಪ್ರತಿಭಟನೆ, ಕ್ಯಾರೆ ಅನ್ನದ ಜನಪ್ರತಿನಿಧಿಗಳು

ಬಿಸಿ ಊಟ ಬಂದ್ ಪ್ರತಿಭಟನೆ, ಕ್ಯಾರೆ ಅನ್ನದ ಜನಪ್ರತಿನಿಧಿಗಳು

ಬೆಂಗಳೂರು: ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿ ನಡೆಯಬೇಕು ಮತ್ತು ಇತರ ಪ್ರಮುಖ ಬೇಡಿಕೆಗಳ ಹೋರಾಟಕ್ಕಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಡಿಯಲ್ಲಿ ಅಕ್ಟೋಬರ್ 30 ರಿಂದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

ಈ ಯೋಜನೆಯ ಫಲದಿಂದ ಇಂದು ರಾಜ್ಯದಲ್ಲೇ 50 ಲಕ್ಷ 80 ಸಾವಿರ ಮಕ್ಕಳು ಬಿಸಿಯೂಟವನ್ನು ಸೇವಿಸುವುದು ಮತ್ತು ಪ್ರತಿಯೊಂದು ಮಗು ಪಾಠಗಳನ್ನು ಗ್ರಹಿಸಬೇಕೆಂಬ ಉದ್ದೇಶದಿಂದಲೂ ಪ್ರಯೋಗಗಳ ನಂತರ ಸರ್ಕಾರ 2001ರಲ್ಲಿ ಅಕ್ಷರ ದಾಸೋಹ ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು.

ಅಕ್ಟೋಬರ್ 30 ರಿಂದ ರಾಜ್ಯಾದ್ಯಂತ ಬಿಸಿಯೂಟ ನೌಕರರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಬೆಂಗಳೂರುನ ಫ್ರೀಡಂ  ಪಾರ್ಕ್ ನಲ್ಲಿ ನೂರಾರು ಜನ ಹೆಣ್ಣು ಮಕ್ಕಳು ಅನಿರ್ದಿಷ್ಟಾವಧಿ ಹೋರಾಟ ಮಾಡಿ ಆರು ದಿನವಾದರೂ ಕೂಡ ಯಾವೊಬ್ಬ ಅಧಿಕಾರಿಯಾಗಲಿ ಜನಪ್ರತಿನಿಧಿಯಾಗಲಿ ಯಾರು ಬಂದು ಕೇಳಲಿಲ್ಲ ಎಂದು ಪ್ರತಿಭಟನಾಕಾರರು ಪ್ರಜಾವಾಹಿನೀಗೆ ತಿಳಿಸಿದರು.

ಈ ಸಂದರ್ಭದಲ್ಲಿ CITU ನ ಪದಾಧಿಕಾರಿ ಮಾತನಾಡಿ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಪ್ರಮುಖ ಗ್ಯಾರಂಟಿಗಳನ್ನು ಜಾರಿಗೆ ತಂದಿರುತ್ತೀರಿ ಆದರೆ ದಿನಕ್ಕೆ 80000 ಮಕ್ಕಳ ಹೊಟ್ಟೆ ತುಂಬಿಸಲು ದುಡಿಯುತ್ತಿರುವ ಮಹಿಳೆಯರ ಬದ್ಧತೆಗೆ ಸರ್ಕಾರ ಪ್ರಶಂಶಿಸುವ ಬದಲಿಗೆ 7ನೇ ತರಗತಿವರೆಗೆ ಅಡುಗೆ ಮಾಡಿ ಹಾಕುವ ನೌಕರರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ ಮತ್ತು ಅವರ ಪರಿಸ್ಥಿತಿಗಳು ಗಂಭೀರವಾಗಿ ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಬಿಸಿಯೂಟ ತಯಾರಿಸುವ ಮಹಿಳೆಯರ 16 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಸೋನಾರ್, ಖಜಾಂಚಿ ಅನ್ನಪೂರ್ಣ ಬಾದ್ಮಿನಾಳ, ಮಹೇಶ, ಇತರ ಪದಾಧಿಕಾರಿಗಳು ಇದ್ದರು. ನೂರಾರು ಮಹಿಳಾ ಪ್ರತಿಭಟನಾಕಾರರು ಈ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಾಕ್ಷಿಯಾದರು.

(ವರದಿಗಾರ, ಎ ಚಿದಾನಂದ)

Related