ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ

ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ

ನೀರಜ್ ಚೋಪ್ರಾ ಗೆ ಭಾರತೀಯರಿಂದ ಅಭಿನಂದನೆಗಳ ಮಹಾಪುೂರವೇ ಹರಿದು ಬರುತ್ತಿದೆ. ಭಾರತದ ಖ್ಯಾತ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ಭಾನುವಾರ ರಾತ್ರಿ ವಿಶ್ವಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು. ಈ ಮೂಲಕ ಇತಿಹಾಸ ಬರೆದಿದ್ದಾರೆ.

2022 ರ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದ ನೀರಜ್ ಚೋಪ್ರಾ ಈ ಬಾರಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವ ಆಶ್ವಾಸನೆ ಮೂಡಿಸಿದ ನೀರಜ್ ಚೋಪ್ರಾ  ಭಾರತೀಯರ  ಕನಸನ್ನು ನನಸು ಮಾಡಿದ್ದಾರೆ.

ಬಾನುವಾರ ನಡೆದ ವಿಶ್ವಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಜಾವೆಲಿನ್ ಸ್ಪರ್ಧೆಯಲ್ಲಿ 88.17 ಮೀ ಎಸೆಯುವುದರ ಮೂಲಕ ಚಿನ್ನಕ್ಕೆ ಮುತ್ತಿಕ್ಕಿ ಇತಿಹಾಸ ಬರೆದಿದ್ದಾರೆ. ಇವರಿಗೆ ಪಾಕಿಸ್ತಾನದ ನದೀಮ್ ಹಾಗೂ ಯಾಕುಬ್ ವಾದ್ಲೆಚ್ ರವರು ಪೈಪೋಟಿ ನೀಡಿದ ಆಟಗಾರರಾಗಿದ್ದಾರೆ. ಪಾಕಿಸ್ತಾನದ ನದೀಮ್ 87.82 ಮೀ ಎಸೆಯುವ ಮೂಲಕ ಬೆಳ್ಳಿ ಪಡೆದರು, ಯಾಕುಬ್ ವಾದ್ಲೇಚ್ 86.67 ಮೀ ಎಸೆಯುವ ಮೂಲಕ ಕಂಚು ತಮ್ಮದಾಗಿಸಿಕೊಂಡಿದ್ದಾರೆ.

Related