ನರೇಶ್, ಪವಿತ್ರ ಲೋಕೇಶ್ ಬಾಂಧವ್ಯ ಗಟ್ಟಿಯಾಗಲು ಕಾರಣ ಇಲ್ಲಿದೆ ನೋಡಿ ..!

  • In Crime
  • July 15, 2022
  • 239 Views
ನರೇಶ್, ಪವಿತ್ರ ಲೋಕೇಶ್ ಬಾಂಧವ್ಯ ಗಟ್ಟಿಯಾಗಲು ಕಾರಣ ಇಲ್ಲಿದೆ ನೋಡಿ   ..!

ಟಾಲಿವುಡ್ ನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಅವರ ಪ್ರಕರಣ ಈವರೆಗೂ ಸರಿಯಾದ ಅಂತ್ಯ ಕಂಡಿಲ್ಲ. ಇದರ ನಡುವೆ ಪವಿತ್ರಾ ಹಾಗೂ ನರೇಶ್ ಅವರ ಪರಿಚಯವಾಯಿತು ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಳೆದ ಕೆಲವು ದಿನಗಳಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿಷಯ ವೈರಲ್ ಆಗುತ್ತಿರುವುದು ಗೊತ್ತೇ ಇದೆ. ನರೇಶ್ ಪವಿತ್ರಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜನರಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಮೇಲಾಗಿ ಈ ರೀತಿ ನಡೆದರೆ ನರೇಶ್ ಗೆ ಇದು ನಾಲ್ಕನೇ ಮದುವೆ ಆಗಿದ್ದು ಹಾಟ್ ಟಾಪಿಕ್ ಆಗಿದೆ.


ನರೇಶ್ ಈಗಾಗಲೇ ಮೂರು ಮದುವೆಯಾಗಿರುವುದು ಗೊತ್ತೇ ಇದೆ. ಈಗಾಗಲೇ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ಅಲ್ಲದೇ ಮೂರನೇ ಪತ್ನಿ ರಮ್ಯಾ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಅವರ ನಾಲ್ಕನೇ ಮದುವೆಯ ಸುದ್ದಿ ವೈರಲ್ ಆಗಿದೆ.

ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರು ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ 2018ರಲ್ಲಿ ಬಂದ ಸಿನಿಮಾವೊಂದು ಇವರಿಬ್ಬರ ಬಾಂಧವ್ಯ ಗಟ್ಟಿಯಾಗಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.


ನರೇಶ್ ಹಾಗೂ ಪವಿತ್ರಾ ಜೊತೆ ಗೂಡಿ 2018ರಲ್ಲಿ ‘ಸಮ್ಮೋಹನಂ‘ ಸಿನಿಮಾ ಮಾಡಿದರು. ಮಹೇಶ್ ಬಾಬು ಅವರ ಸೋದರ ಮಾವ ಸುಧೀರ್ ಬಾಬು ಈ ಚಿತ್ರದ ನಾಯಕರಾಗಿದ್ದರು. ಸುಧೀರ್ ಅವರ ಪೋಷಕರ ಪಾತ್ರದಲ್ಲಿ ನರೇಶ್ ಪವಿತ್ರ- ಲೋಕೇಶ್ ನಟಿಸಿದ್ದರು. ಇದೀಗ ಈ ಸಿನಿಮಾದಲ್ಲಿ ಇಬ್ಬರೂ ನಟಿಸುತ್ತಿರುವ ಹಲವು ದೃಶ್ಯಗಳು ವೈರಲ್ ಆಗುತ್ತಿವೆ.

Related