ಮುಂಬೈ : ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಶುಕ್ರವಾರ ಬೆಳಿಗ್ಗೆ 10 ಗಂಟೆಯವರೆಗೆ 10 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕೊಲಾಬಾದಲ್ಲಿ 124 ಮಿ.ಮೀ, ಕುಫೆ ಪರಾಧೆಯಲ್ಲಿ 105 ಮಿ.ಮೀ, ವಾರ್ಲಿಯಲ್ಲಿ 85 ಮಿ.ಮೀ ಮಲಬಾರ್‌ನಲ್ಲಿ 81 ಮಿ.ಮೀ ಮಳೆ ಸುರಿದಿದೆ. ಇನ್ನು ಕೆಲವು ಉಪನಗರಗಳಲ್ಲಿ 40 ಮಿ.ಮೀ ಮಳೆ ದಾಖಲಾಗಿದೆ.
ಮುಂಬೈನಲ್ಲಿ ಶುಕ್ರವಾರ ಮತ್ತು ಶನಿವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.