ಅವರೆಕಾಳಿನಲ್ಲಿದೆ ಆರೋಗ್ಯ!

ಅವರೆಕಾಳಿನಲ್ಲಿದೆ ಆರೋಗ್ಯ!

ಡಿಸೆಂಬರ್- ಜನವರಿ ತಿಂಗಳು ಬಂತೆಂದರೆ ಸಾಕು ಎಲ್ಲಂದರೆ ಬರಿ ಅವರೆಕಾಳು. ಅವರೆಕಾಳು ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಹೆಚ್ಚಾಗಿ ಸಿಗುವಂತ ಕಾಲಾಗಿದೆ.

ಇನ್ನು ಅವರೆಕಾಳನ್ನು ನಾವು ಕ್ರಮೇಣವಾಗಿ ಪ್ರತಿನಿತ್ಯ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಪ್ರಯೋಜನಗಳನ್ನು ಕಂಡುಕೊಳ್ಳಬಹುದೆಂದು ವೈದ್ಯರು ತಿಳಿಸುತ್ತಾರೆ. ಎಲ್ಲರೂ ತಮ್ಮ ಮನೆಯಲ್ಲಿ ಅವರೆಕಾಳು ಸಾಂಬಾರ್ ಅಥವಾ ಅವರೆಕಾಳ್ ಪಲ್ಯವನ್ನು ಮಾಡಿ ಸೇವಿಸುತ್ತಾರೆ.  ಇನ್ನಿತರ ತಿಂಡಿ ತಿನಿಸುಗಳನ್ನು ಮಾಡಿ ಸೇವಿಸುವುದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ.

ಅವರೆಕಾಳಿನಲ್ಲಿ ಸಾಮಾನ್ಯವಾಗಿ ವಿಟಮಿನ್ ಗಳು ಹೆಚ್ಚಾಗಿರುವುದರಿಂದ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೇ ಖನಿಜಾಂಶಗಳು, ಪ್ರೋಟೀನ್ ಮತ್ತು ನಾರಿನಾಂಶವು ಇದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅವರೆ ಕಾಳು ದೇಹಕ್ಕೆ ಅಗತ್ಯವಿರುವಂತಹ ಶಕ್ತಿ ಒದಗಿಸುವುದರೊಂದಿಗೆ ಮೆದುಳು ಮತ್ತು ನರಕೋಶಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿ ಆಗಿವೆ.

ನಿದ್ರಾಹೀನತೆ ತಗ್ಗಿಸಲು ಸಹಕಾರಿ: ನಿದ್ರಾಹೀನತೆ ಇರುವವರು ಅವರೆಕಾಳು ಸೇವನೆ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಅವರೆಕಾಳನ್ನು ಸೇವನೆ ಮಾಡುವುದರಿಂದಾಗಿ ಇದರಲ್ಲಿ ಇರುವ ಪೋಷಕಾಂಶಗಳು ಮೆದುಳಿಗೆ ಒಳ್ಳೆಯದು.

ಅವರೆಕಾಳಿನಲ್ಲಿರುವ ಮೆಗ್ನಿಶಿಯಂ ಅಂಶವು ಮನಸ್ಥಿತಿ ಸುಧಾರಣೆ ಮಾಡುವುದು. ಮೆಗ್ನಿಶಿಯಂ ನಿದ್ರಾಹೀನತೆಯನ್ನು ತಗ್ಗಿಸುವುದು. ಇದನ್ನು ಸೇವನೆ ಮಾಡಿದರೆ ಅದರಿಂದ ರಾತ್ರಿ ವೇಳೆ ಒಳ್ಳೆಯ ನಿದ್ರೆ ಬರುತ್ತದೆ ಎನ್ನುವುದು ವರದಿಗಳಲ್ಲಿ ಸಾಬೀತಾಗಿದೆ.

ರಕ್ತದೊತ್ತಡ ತಗ್ಗಿಸಲು ಅನುಕೂಲಕರ: ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಅವರೆ ಕಾಳು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಇದರಲ್ಲಿ ಉತ್ತಮ ಪ್ರಮಾಣದ ಪೊಟಾಶಿಯಂ ಅಂಶವಿದ್ದು, ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಪೊಟಾಶಿಯಂ ರಕ್ತನಾಳಗಳನ್ನು ಅಗಲವಾಗಿಸುವುದು ಮತ್ತು ಇದರಿಂದ ರಕ್ತವು ಸರಾಗವಾಗಿ ಹರಿದುಹೋಗಲು ಸಹಕಾರಿ. ಇದರಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ.

ಕ್ಯಾನ್ಸರ್ ಅಪಾಯ ದೂರ: ಅವರೆ ಕಾಳನ್ನು ಸೇವನೆ ಮಾಡುವುದರಿಂದ ಇರುವ ಉಪಯೋಗಗಳಲ್ಲಿ ಕ್ಯಾನ್ಸರ್‌ ತಡೆಗೆ ಸಹಕಾರಿ ಆಗುವುದು ಸಹ ಒಂದು ಪ್ರಮುಖ ಅಂಶವಾಗಿದೆ. ಅವರೆಕಾಳಿನಲ್ಲಿ ಸತುವಿನ ಅಂಶವು ಉತ್ತಮ ಪ್ರಮಾಣದಲ್ಲಿದೆ. ಸತು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುವುದರೊಂದಿಗೆ ಹಲವಾರು ರೀತಿಯ ಅನಾರೋಗ್ಯಗಳನ್ನು ಕಡಿಮೆ ಮಾಡಲು ಇದು ಸಹಕಾರಿ.

ತೂಕ ಇಳಿಸುವುದಕ್ಕೆ ಸಹಕಾರಿ: ಅವರೆಕಾಳನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ. ಇದು ತೂಕ ಇಳಿಸಲು ಸಹಕಾರಿ.

ಮೂಳೆಗಳನ್ನು ಬಲಪಡಿಸುತ್ತದೆ: ಅವರೆಕಾಳಿನಲ್ಲಿ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿದೆ ಮತ್ತು ಇದು ಅಸ್ಥಿರಂಧ್ರತೆ ಸಮಸ್ಯೆಯ ವಿರುದ್ಧ ಹೋರಾಡಲು ತುಂಬಾ ಪರಿಣಾಮಕಾರಿ ಆಗಿದೆ.

 

Related