ಮಹಿಳಾ ಫುಟ್ ಬಾಲ್ ತಂಡಕ್ಕೆ ಮುಖ್ಯ ತರಬೇತುದಾರ

  • In Sports
  • August 13, 2021
  • 431 Views
ಮಹಿಳಾ ಫುಟ್ ಬಾಲ್ ತಂಡಕ್ಕೆ ಮುಖ್ಯ ತರಬೇತುದಾರ

ನವದೆಹಲಿ: ಭಾರತದ ಮಹಿಳಾ ಫುಟ್ ಬಾಲ್ ತಂಡದ ಮುಖ್ಯ ತರಬೇತುದಾರರಾಗಿ ಸ್ವೀಡನ್ ನ ಥಾಮಸ್ ಡೆನ್ನರ್ ಬಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ (ಎಐಎಫ್ ಎಫ್ ) ಶುಕ್ರವಾರ ಪ್ರಕಟಿಸಿದ್ದು, ಮುಂದಿನ ವರ್ಷ ನಡೆಯಲಿರುವ ಎಎಫ್ ಸಿ ಏಷ್ಯಾ ಕಪ್ ಟೂರ್ನಿಗೆ ಸಜ್ಜುಗೊಳ್ಳಲು ತಂಡಕ್ಕೆ ಅವರು ನೆರವಾಗುತ್ತಿದ್ದಾರೆ ಎಂದು ಹೇಳಿದರು.
ಮಹಿಳಾ ತಂಡದ ತರಬೇತುದಾರ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ ಗೆ ಕೃತಜ್ಞನಾಗಿರುತ್ತೇನೆ. ಮಹಿಳಾ ತಂಡವನ್ನು ತಯಾರಿ ಮಾಡುವುದು ನನ್ನ ಮುಂದಿರುವ ಸವಾಲಾಗಿದೆ ಎಂದು ಡೆನ್ನರ್ ಬಿ ತಿಳಿಸಿದರು.
ಡೆನ್ನರ್ ಬಿ ಮೂವತ್ತು ವರ್ಷಗಳ ಅನುಭವ ಹೊಂದಿದ್ದು, ಹಲವು ರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ್ದಾರೆ. ಮಹಿಳಾ ತಂಡಕ್ಕೆ ಹೊಸ ಚೈತನ್ಯ ತುಂಬಲಿದ್ದಾರೆ ಎಂದು ಎಐಎಫ್ ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related