ಹರಳೂರು: ದಾನಿಗಳಿಂದ ರಂಗ ಮಂದಿರ ನಿರ್ಮಾಣ

ಹರಳೂರು: ದಾನಿಗಳಿಂದ ರಂಗ ಮಂದಿರ ನಿರ್ಮಾಣ

ಬೆಂಗಳೂರು: ಹರಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದೆ ಓದಿರುವ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಆಗಿರುವ ಸೋಮಶೇಖರ್ ರೆಡ್ಡಿ ಮತ್ತು ಆತನ ಸ್ನೇಹಿತರು ಸುಮಾರು 25 ಲಕ್ಷ ಹಣ ವೆಚ್ಚದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ನೇಹ ರಂಗ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ.

ಇನ್ನು ಈ ರಂಗ ಮಂದಿರವನ್ನು ಇಂದು ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಅವರು ಉದ್ಘಾಟನೆ ಮಾಡಿ ಮಾತನಾಡಿದರ ಅವರು, ಹರಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೋಸ್ಕರ ಸೋಮಶೇಖರ್ ಮತ್ತುಅವರ ಸ್ನೇಹಿತರು ಈ ರಂಗಮಂದಿರವನ್ನು ನಿರ್ಮಾಣ ಮಾಡಿರುವುದರಿಂದ ಇದು ಗ್ರಾಮಕ್ಕು ಮತ್ತು ಶಾಲೆಗೂ ಒಂದು ಮಾದರಿಯಾಗಿದೆ ಎಂದು ಹೇಳಿದರು.

ನಗರದಲ್ಲಿರುವ ಸರ್ಕಾರಿ ಶಾಲೆಗಳಿಗೆ ಒತ್ತು ನೀಡುವುದರೆ ಜೋತೆಗೆ ಗ್ರಾಮಗಳಲ್ಲಿರುವಂತಹ ಸರ್ಕಾರಿ ಶಾಲೆಗಳಿಗೂ ಒತ್ತು ನೀಡಿ, ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಗ್ರಾಮದ ಮಕ್ಕಳಿಗೆ ಒದಗಿಸಬೇಕೆಂದು ಹೇಳಿದರು.

ಸೋಮಶೇಖರ್ ಅವರು ಮತ್ತು ಅವರ ಸ್ನೇಹಿತರು ಈ ರಂಗ ಮಂದಿರಕ್ಕೆಂದು 25 ಲಕ್ಷ ದಾನ ನೀಡಿರುವುದು ಒಂದು ಒಳ್ಳೆಯ ಕೆಲಸ. ಹೀಗೆ ಗ್ರಾಮದಲ್ಲಿ ಕಾರ್ಯಕ್ರಮಗಳಿಗೆ ನೀವು ಸಹಾಯ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವೇ ಎಂದು ಹೇಳಿದರು.

ಇನ್ನು ಅರವಿಂದ್ ಲಿಂಬಾವಳಿಯವರು ಶಾಸಕರಾಗಿದ್ದಾಗ ಈ ಗ್ರಾಮಕ್ಕೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಅವರಿಗೆ ಹೇಗೆ ಪ್ರೋತ್ಸಾಹ ನೀಡಿದ್ದಾರೆ, ಹಾಗೆ ಕೂಡ ನನಗೂ ಪ್ರೋತ್ಸಾಹ ನೀಡಿ ಎಂದು ಈ ಸಂದರ್ಭದಲ್ಲಿ ಹೇಳಿದರು. ಶಿಕ್ಷಣ ಸಂಸ್ಥೆಗೆ ಒಂದು ರಂಗಮಂದಿರವನ್ನು ಉದ್ಘಾಟನೆ ಮಾಡಿರುವುದು ನನಗೆ ಬಹಳ ಸಂತೋಷಕರ ತಂದಿದೆ ಎಂದು ಹೇಳಿದರು.

ಮಾದೇವಪುರದ ಬಿಜೆಪಿಯ ಅಧ್ಯಕ್ಷರಾದ ಮನೋಹರ್ ರೆಡ್ಡಿ, ಮುಖಂಡರಾದ ಸುರೇಶ್ ಹಾಗೂ ಇನ್ನಿತರರು ಶಾಲಾ ಮುಖ್ಯ ಶಿಕ್ಷಕರು  ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related