ಬಿಎಂಟಿಸಿ ಚಾಲಕರಿಗೆ ಸಿಹಿ ಸುದ್ದಿ

ಬಿಎಂಟಿಸಿ ಚಾಲಕರಿಗೆ ಸಿಹಿ ಸುದ್ದಿ

ಬೆಂಗಳೂರ: ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ಗೈರು ಹಾಜರಾಗುತ್ತಿದ್ದರೆ ಇದರಿಂದ ಸರ್ವಜನಿಕರಿಗೆ ಬಸ್ ವ್ಯವಸ್ಥೆಯನ್ನು ಸರಿಯಾಗಿ ಕಲ್ಪಿಸಲಾಗುತ್ತಿಲ್ಲವೆಂದು ಇನ್ನು ಮುಂದೆ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ 500 ವಿಶೇಷ ಭತ್ಯೆ ಘೋಷಣೆ ಮಾಡಲು ನಿರ್ಧರಿಸಿದ ಎಂದು ತಿಳಿದುಬಂದಿದೆ.

ಹೌದು, ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರು ಹೆಚ್ಚಾಗಿರುವುದರಿಂದ ಹೆಚ್ಚುವರಿ ಬಸ್ ಗಳನ್ನು ಬಿಡುಗಡೆ ಮಾಡುವುದು ಅನಿವಾರ್ಯವಾಗಿದ್ದು ಚಾಲನಾ ಸಿಬ್ಬಂದಿ ಗೈರಿನಿಂದ ಸಮರ್ಪಕವಾಗಿ ಬಸ್‌ ಸೇವೆ ನೀಡಲು ಆಗುತ್ತಿರುವ ಸಮಸ್ಯೆ ನಿವಾರಿಸಲು ವಾರದ ರಜೆ ಹೊರತುಪಡಿಸಿ ಬೇರೆ ರಜೆಯನ್ನು ತೆಗೆದುಕೊಳ್ಳದೆ ಕೆಲಸ ಮಾಡುವ ಚಾಲನಾ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಲು ಬಿಎಂಟಿಸಿ ನಿರ್ಧರಿಸಿದೆ. ಬಿಎಂಟಿಸಿಯ ಚಾಲನಾ ಸಿಬ್ಬಂದಿ ಪೈಕಿ ಪ್ರತಿದಿನ ಶೇಕಡ 6.8ರಷ್ಟು ಸಿಬ್ಬಂದಿ ದೈನಂದಿನ ಅಥವಾ ಧೀರ್ಘಾವಧಿ ರಜೆಯಲ್ಲಿರುತ್ತಾರೆ. ಚಾಲನಾ ಸಿಬ್ಬಂದಿ ಪದೇಪದೆ ರಜೆ ಪಡೆಯುವುದರಿಂದಾಗಿ ಬಿಎಂಟಿಸಿ ಸಮರ್ಪಕವಾಗಿ ಬಸ್‌ ಸೇವೆ ನೀಡಲಾಗುತ್ತಿಲ್ಲ.

ನಿಗಮದ ಅಂಕಿ ಅಂಶದ ಪ್ರಕಾರ ಚಾಲನಾ ಸಿಬ್ಬಂದಿ ಗೈರಿನಿಂದ 2023ರ ಏಪ್ರಿಲ್‌ನಿಂದ 2023ರ ಅಕ್ಟೋಬರ್‌ ವರೆಗೆ 44.27 ಲಕ್ಷ ಅನುಸೂಚಿ ರದ್ದಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಲು ಚಾಲನಾ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಲು ಮುಂದಾಗಿದೆ.ಬಿಎಂಟಿಸಿಯ ನೂತನ ಆದೇಶದಂತೆ ತಿಂಗಳಲ್ಲಿ ವಾರದ ರಜೆಗಳನ್ನು ಹೊರತುಪಡಿಸಿ 26 ದಿನಗಳ ಕಾಲ ಬೇರೆ ರಜೆ ಪಡೆಯದೆ ಕರ್ತವ್ಯಕ್ಕೆ ಹಾಜರಾಗುವ, ಆ ತಿಂಗಳು ಯಾವುದೇ ರೀತಿಯ ಶಿಸ್ತು ಕ್ರಮಕ್ಕೆ ಒಳಗಾಗದ ಚಾಲನಾ ಸಿಬ್ಬಂದಿಗೆ ಮಾಸಿಕ ₹500 ವಿಶೇಷ ಭತ್ಯೆಯನ್ನು ನೀಡಲಾಗುವುದು.

ಈ ಕುರಿತಂತೆ ಪ್ರತಿ ತಿಂಗಳ ವೇತನಕ್ಕೂ ಮುನ್ನ ರಜೆ ರಹಿತ ಚಾಲಕರ ಘಟಕವಾರು ಪಟ್ಟಿಯನ್ನು ವಲಯದ ಅಧಿಕಾರಿಗಳು ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅದನ್ನು ಆಧರಿಸಿ ರಜೆ ರಹಿತ ಚಾಲಕರ ವೇತನಕ್ಕೆ ವಿಶೇಷ ಭತ್ಯೆ ಮೊತ್ತವನ್ನು ನೀಡಲಾಗುತ್ತದೆ.

Related