Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅಂಗವಿಕಲರಿಗೆ ಆಧ್ಯತೆ ನೀಡಿ: ಶಾಸಕ ತುನ್ನೂರ
  • State

ಅಂಗವಿಕಲರಿಗೆ ಆಧ್ಯತೆ ನೀಡಿ: ಶಾಸಕ ತುನ್ನೂರ

admin January 24, 2025
Spread the love

ಶಹಾಪುರ: ರಾಜ್ಯ ಸರ್ಕಾರ ಅಂಗವಿಕಲರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ತಮ್ಮ ಸಮಸ್ಯೆಗಳನ್ನು ಹೊತ್ತು ಅಂಗವಿಕಲರು ಸರ್ಕಾರಿ ಕಚೇರಿಗಳಿಗೆ ಅಥವಾ ಇತರೆ ಸಂಘ ಸಂಸ್ಥೆಗಳಿಗೆ ಬಂದಾಗ ಅವರಿಗೆ ಆದ್ಯತೆ ನೀಡುವ ಮೂಲಕ ಅವರ ಏಳ್ಗೆಗೆ ಸಹಕರಿಸಬೇಕು ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.

ನಗರದ ತಾಲೂಕ ಪಂಚಾಯತ ಆವರಣದಲ್ಲಿ ತಾಲೂಕ ವಿಕಲಚೇತನ ಕ್ಷೇಮಾಭಿವೃದ್ದಿ ಸಂಘ ಹಾಗೂ ತಾಲೂಕ ವಿವಿದೊದ್ದೇಶ ಮತ್ತು ಗ್ರಾಮೀಣ ಪುನರ್ ವಸತಿ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ನೆರವು ನೀಡಲಾಗುತ್ತಿದೆ. ಅವರಿಗೂ ಸಮಾನ ಅವಕಾಶಗಳು ಲಭಿಸಬೇಕು ಎಂಬುವುದು ಸರ್ಕಾರದ ಉದ್ದೇಶವಾಗಿದೆ. ಕೆಳಗೆ ಬಿಳುವ ವ್ಯಕ್ತಿಗಳ ಮೇಲಕ್ಕೆತ್ತುವುದೇ ಮಾನವ ಧರ್ಮ, ಪರಸ್ಪರ ಸಹಾಯದಿಂದ ಬದುಕು ನಡೆಸಬೇಕು. ಸವಾಲು ಎದುರಿಸುವ ವಿಶೇಷ ಶಕ್ತಿ ಹಾಗೂ ಸೌರ್ಯವನ್ನು ಅಂಗವಿಕಲರಿಗೆ ದೇವರು ನೀಡಿದ್ದಾನೆ, ಆತ್ಮವಿಶ್ವಾಸದಿಂದ ಇರಿ, ಛಲ ಮತ್ತು ನಂಬಿಕೆ ಇರಬೇಕು ಎಂದರು. ಇದನ್ನೂ ಓದಿ: 2015 ರಿಂದಲೂ ಫೇಕ್ ಅಂಕಪಟ್ಟಿ ಹಾವಳಿ, ತನಿಖೆ ಆಗಲಿ

ಖ್ಯಾತ ವೈದ್ಯರು, ಬಿಜೆಪಿ ಹಿರಿಯ ಮುಖಂಡ ಡಾ.ಚಂದ್ರಶೇಖರ ಸುಬೇದಾರ ಮಾತನಾಡಿ ಮನಸ್ಸಿನಲ್ಲಿ ಕೀಳರಿಮೆ ಬಿಡಬೇಕು. ಅಂಗವಿಕಲರದ್ದು ಹೋರಾಟದ ಬದುಕು. ಆತ್ಮವಿಶ್ವಾಸದಿಂದ ಬದುಕಿ ಎಂದು ಸಲಹೆ ನೀಡಿದರು.

ಸರ್ಕಾರ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡುವುದರ ಜೊತೆಗೆ ಆಟೋ ನೀಡಿ ಅವರ ಬಾಳಿಗೆ ಬೆಳಕಾಗಬೇಕು, ಭವನ ಒದಗಿಸಿಕೊಡಬೇಕು, ಬಸ್‌ಪಾಸ್ ಉಚಿತ ಮಾಡಬೇಕು ವಿಕಲಚೇತನರ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ವಿಕಲಚೇತನ ಕ್ಷೇಮಾಭಿವೃದ್ದಿ ಸಂಘದ ತಾಲೂಕ ಅಧ್ಯಕ್ಷ ಸಾಹೇಬ್ ಜಾನಿ ಅವರು ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ, ತಾ.ಪಂ ಇಓ ಬಸವರಾಜ ಶರಬೈ, ಶರಣು ಗದ್ದುಗೆ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ, ಡಾ. ಪದ್ಮಾನಾಬ್ ಗಾಯಕವಾಡ್, ಭೀಮಣ್ಣ ಶಖಾಪುರ, ಮೌನೇಶ ಹಳಿಸಗರ, ನಾಗರಾಜ ಮೂಲ್ಕಿ, ಎಂಆರ್‌ಡಬ್ಲೂ, ಸಂಗಾರೆಡ್ಡಿ ಧನರೆಡ್ಡಿ, ವಿಶ್ವನಾಥರೆಡ್ಡಿ ತುಮಕೂರ, ಲಕ್ಷ್ಮೇಶ್ವರ ಹಳಿಸಗರ, ಕುಮಾರ, ನಂದಯ್ಯ ಸ್ವಾಮಿ, ಮಲ್ಲಿಕಾರ್ಜುನ ಹತ್ತಿಗುಡೂರ, ಮಲ್ಲಿಕಾರ್ಜುನ ಶಾರದಳ್ಳಿ, ಸೌಭಾಗ್ಯ, ಸುಜಾಥ ಹೊಸ್ಮನಿ ಸೇರಿದಂತೆ ಇತರರು ಇದ್ದರು.

About the Author

admin

Administrator

Visit Website View All Posts

Spread the love

Post navigation

Previous: ಅದ್ಧೂರಿ ಗಣರಾಜ್ಯೋತ್ಸವ ದಿನಾಚರಣೆಗೆ ಸಿಲಿಕಾನ್‌ ಸಿಟಿ ರೆಡಿ
Next: ಮಾನವೀಯತೆ ತೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Views:

23

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.