ಶಹಾಪುರ: ನಕಲಿ ಅಂಕಪಟ್ಟಿ ತಯಾರಿಸುವ ಜಾಲ ಕಲ್ಯಾಣ ಕರ್ನಾಟಕದಲ್ಲಿ ನಾಯಿಕೊಡೆಯಂತೆ ಬೆಳೆದುಕೊಂಡಿದ್ದು, ಕೇಲ ಪ್ರಭಾವಿಗಳು ಇದನ್ನೆ ಉದ್ಯೋಗವಾಗಿಸಿಕೊಂಡಿದ್ದು ಇಂತಹ ದಂಧೆಗೆ ಸಾಥ್ ನೀಡುವುದಲ್ಲದೆ ಹಣ ಪಡೆದ ಕೋಟ್ಯಾಧೀಶರಾಗಿ ಮೆರಿಯುತ್ತಿದ್ದು ಕೂಡಲೇ ಅಂಥವರನ್ನು ಬಂಧಿಸಿ ಜನ್ಮ ಜಾಲಾಡಬೇಕು ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಆಗ್ರಹಿಸಿದ್ದಾರೆ.
ವಿವಿಧ ಹೆಸರಿನಲ್ಲಿ ಯುನಿವರ್ಸಿಟಿಗಳನ್ನು ತೆರೆದು ಅದರಲ್ಲಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಇಂತಿಷ್ಟು ಹಣ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಇನ್ನೂ ಕೇಲವರು ನಕಲಿ ಅಂಕಪಟ್ಟಿಗಳನ್ನು ಬಳಸಿ ಕೇಲವರು ಹುದ್ದೆ, ಮುಂಬಡ್ತಿ, ಸಹ ಪಡೆದಿದ್ದು 2015 ರಿಂದ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡ ಡಿ ಗ್ರೂಪ್ ನೌಕರರು ಸರ್ಕಾರಕ್ಕೆ ವಂಚಿಸಿ ನೇಮಕಗೊಂಡಿದ್ದು, ಇದೀಗ ಅವೆಲ್ಲ ನೇಮಕಾತಿಗಳ ಪರಿಶೀಲನೆ ಮಾಡಿದಾಗ ಅಸಲಿ ಬಣ್ಣ ಬಯಲಿಗೆ ಬರಲಿದೆ.
ತಾಲೂಕಿನ ಸಾರ್ವಜನಿಕ ಆಸ್ಪತ್ರೆ, ಸುರಪುರ ಸಾರ್ವಜನಿಕ ಆಸ್ಪತ್ರೆ, ಸಗರ, ದೋರನಹಳ್ಳಿ, ವನದುರ್ಗ, ಹೇಮನೂರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ 14 ಜನ ನೌಕರರು ಕುರಿತು ಡಿ’ ಗ್ರೂಪ್ ನೌಕರರು ನಕಲಿ ಅಂಕಪಟ್ಟಿ ನೀಡಿದ್ದಾರೆ ಎಂದು ವರದಿಯಾಗಿದ್ದು ಇವರುಗಳ ಮೇಲೆ ಯಾವುದೇ ಕ್ರಮ ಆಗಿಲ್ಲಾ.
ಕೇಲ ಮಾಹಿತಿಗಳ ಪ್ರಕಾರ ಪಿಎಚ್‌ಡಿ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ನಕಲಿ ಅಂಕಪಟ್ಟಿ ನೀಡಿ ಇದಕ್ಕೆ ಹಣ ನಿಗದಿ ಮಾಡಿದ್ದಾರೆ. ಅದೇ ರೀತಿ ದಂಧೆಕೋರರು ನಕಲಿ ಅಂಕಪಟ್ಟಿ ನೀಡಿ ಹಣ ಮಾಡುತ್ತಿದ್ದಾರೆ.
ಪದವಿ ಅಂಕಪಟ್ಟಿಗಳು, ಪಿಎಚ್‌ಡಿ ಪ್ರಮಾಣ ಪತ್ರಗಳನ್ನು ಆರೋಪಿಗಳು ಅಧಿಕ ಬೆಲೆಗೆ ಮಾರಾಟ ಮಾಡಿದ್ದು ಈ ಎಲ್ಲಾದರೂ ಕುರಿತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡಬೇಕು ಎನ್ನುವ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸುಮಾರು 10 ವರ್ಷಗಳ ಹಿಂದೆಯೇ ಇಂಥದ್ದೊಂದು ಅಕ್ರಮ ವೇಸಗಿರುವುದು ಬೆಳಕಿಗೆ ಬಂದಿದ್ದು, ೨೦೧೫ ರಲ್ಲಿಯೇ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡವರಲ್ಲಿ ಇನ್ನೆಷ್ಟು ನೇಮಕಾತಿಗಳಲ್ಲಿ ನಕಲಿಗಳು ಅಕ್ರಮವಾಗಿ ನುಗ್ಗಿದ್ದಾರೋ ಎನ್ನುವ ಪ್ರಶ್ನೇ ಎದುರಾಗಿದೆ. ಅಂಕಪಟ್ಟಿಗಳ ನೈಜತೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರಿಶೀಲನೆ ಮಾಡಬೇಕು.
ಶಹಾಪುರ, ಜೇವರ್ಗಿಯಲ್ಲಿ ಗರಿಷ್ಟ ನಕಲಿ
ರಾಜ್ಯದಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ‘ಡಿ’ ಗ್ರೂಪ್ ಹುದ್ದೆ ಗಿಟ್ಟಿಸಿದವರಲ್ಲಿ ಶಹಾಪುರ, ಜೇವರ್ಗಿನವರೆ ಹೆಚ್ಚಿನವರು ಇದ್ದಾರೆ. ಇಲ್ಲಿ ಆರೋಗ್ಯ ಇಲಾಖೆಯಲ್ಲಿ ೧೪ ಜನರು ನಕಲಿಗಳಿದ್ದು, ತಪ್ಪಿತಸ್ಥರ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ವಂಚನೆ ಪ್ರಕರಣ ದಾಖಲಿಸಿ ಬಂಧಿಸಬೇಕು.
ವಂಚನೆ ಪ್ರಕರಣ ದಾಖಲಿಸಿ, ತನಿಖೆಯಾಗಲಿ
ಈಗಾಗಲೇ ಕ.ಕರ್ನಾಟಕದಲ್ಲಿ ನಕಲಿ ಅಂಕಪಟ್ಟಿ ತಯಾರಿಸುವ ಜಾಲ ಇರುವುದು ದೃಢಪಟ್ಟಿದ್ದು, ತನ್ನ ಅಂಕಪಟ್ಟಿಗಳನ್ನು ಫೇಕ್ ಆಗಿ ಸೃಷ್ಠಿಸುವವರ ವಿರುದ್ಧ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವಂಚನೆ ಕೇಸ್ ದಾಖಲಿಸಬೇಕು. ನಕಲಿ ಅಂಕಪಟ್ಟಿ ನೀಡಿ ವಂಚಿಸಿ ಆಯ್ಕೆಯಾದವರ ವಿರುದ್ಧ ಆರೋಗ್ಯ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ನಕಲಿ ಅಂಕಪಟ್ಟಿ ನೀಡಿ ಆಯ್ಕೆಯಾದವರ ಜನ್ಮ ಜಾಲಾಡಿದರೆ ಅಕ್ರಮದ ಹಿಂದೆ ಯಾರು ಇದ್ದಾರೆ ಎನ್ನುವುದು ಬಯಲಾಗುತ್ತದೆ. ಅಂಥವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕಾರ್ಮಿಕ ಮುಖಂಡ ಚೆನ್ನಪ್ಪ ಆನೇಗುಂದಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಗೊಲ್ಮಾಲ್..!
ಕಲಬುರಗಿ ನಕಲು ಕೇಂದ್ರ?
ಮೂಲಗಳ ಪ್ರಕಾರ ನಕಲಿ ಅಂಕಪಟ್ಟಿ ಕಲಬುರಗಿ ಜಿಲ್ಲೆಗಳಿಂದಲೇ ಬರುತ್ತಿವೆ ಎನ್ನುವ ಶಂಕೆ ವ್ಯಕ್ತವಾಗುತಿದ್ದು, ಈಗ ಸಿಕ್ಕಿಬಿದ್ದಿರುವ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಹುದ್ದೆಯಿಂದ ಅವರನ್ನು ಕೈಬಿಟ್ಟು, ತನಿಖೆ ನಡೆಸಿದರೆ ಇದರ ಹಿಂದೆ ಯಾರಿದ್ದಾರೆ ಎನ್ನುವ ಸತ್ಯ ಬಯಲಿಗೆ ಬರಲಿದೆ.
