ಲ್ಯಾಪ್‌ಟಾಪ್ ಕೊಡಿ, ಇಲ್ಲವೇ ಆನ್’ಲೈನ್ ಕ್ಲಾಸ್ ಬೇಡ

ಲ್ಯಾಪ್‌ಟಾಪ್ ಕೊಡಿ, ಇಲ್ಲವೇ ಆನ್’ಲೈನ್ ಕ್ಲಾಸ್ ಬೇಡ

ಬೆಂಗಳೂರು : ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಿ, ಇಲ್ಲವೇ ಆನ್’ಲೈನ್ ಕ್ಲಾಸ್ ನಿಲ್ಲಿಸಿ ಎಂದು ಸರ್ಕಾರಕ್ಕೆ ಪೋಷಕರು ಆಗ್ರಹಿಸುತ್ತಿದ್ದಾರೆ. ನಾನು ಮತ್ತು ನನ್ನ ಪತಿ ಇಬ್ಬರೂ ಮಗಳಿಗೆ ಆನ್’ಲೈನ್ ತರಗತಿ ಆರಂಭವಾಗುತ್ತದೆಂದು ಮನೆಯಲ್ಲಿಯೇ ಕುಳಿತರೆ ಸರಕುಗಳನ್ನು ಮಾರುವವರಾರು? ಎಂದು ಜಯನಗರದ ಬೀದಿ ವ್ಯಾಪಾರಿ ಶಾಂತಿಯೆಂಬುವವರು ಪ್ರಶ್ನಿಸಿದ್ದಾರೆ.

ಕೊರೋನಾ ವೈರಸ್ ಭಯದಿಂದ ಲಾಕ್’ಡೌನ್ ಸಡಿಲಗೊಂಡರು ಈಗಲೂ ಜನರು ಸರಕು ಖರೀದಿ ಮಾಡಲು ಬರುತ್ತಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ತಾತ್ಕಾಲಿಕವಾಗಿ ಆನ್’ಲೈನ್ ಶಿಕ್ಷಣವನ್ನು ನಿಲ್ಲಿಸಬೇಕು. ಇಲ್ಲವೇ ಮಕ್ಕಳಿಗೆ ಲ್ಯಾಪ್’ಟಾಪ್ ವಿತರಿಸಬೇಕೆಂದು ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘ ಆಗ್ರಹಿಸಿದೆ.

ಕೆಲವು ಬೀದಿ ವ್ಯಾಪಾರಿಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸ್ಮಾರ್ಟ್ಫೋನ್ ನೀಡಿದ್ದಾರೆ. ಆದರೆ, ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಇರುವಾಗ ಏಕಕಾಲದಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಬೇಕಾದರೆ ಅವರು ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಂಘ ತಿಳಿಸಿದೆ.

ಈಗಾಗಲೇ ಬಾಡಿಗೆಗಳನ್ನು ಕಟ್ಟಲು ಸಾಧ್ಯವಾಗದೆ, ಸರಕುಗಳು ಮಾರಾಟವಾಗದೆ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆನ್’ಲೈನ್ ಶಿಕ್ಷಣ ಕೊಡಿಸುವುದು, ಶಾಲೆಗೆ ಶುಲ್ಕ ಕಟ್ಟುವುದು, ಮೊಬೈಲ್’ಗಳಿಗೆ ಇಂಟರ್‌ನೆಟ್ ರೀಚಾರ್ಜ್ ಮಾಡುವುದು ಕಷ್ಟಕರವಾಗುತ್ತದೆ.

ಇಂಟರ್‌ನೆಟ್ ಬಳಕೆಯಿಂದ ಕೆಲ ಮಕ್ಕಳು ಅಡ್ಡದಾರಿಗಿಳಿಯುವ ಸಾಧ್ಯತೆಗಳಿವೆ. ಶಿಕ್ಷಣ ಪಡೆದುಕೊಳ್ಳುತ್ತಿದ್ದೇವೆಂದು ವಿಡಿಯೋ ನೋಡುವುದು, ಗೇಮ್ ಆಡುವುದನ್ನು ಮಾಡುತ್ತಾರೆ. ಅನಕ್ಷರಸ್ಥರಿಗೆ ಆನ್’ಲೈನ್ ಶಿಕ್ಷಣ ಅರ್ಥವಾಗುವುದಿಲ್ಲ. ಝೂಮ್ ಆ್ಯಪ್ ಬಳಕೆ ಅವರಿಗೆ ತಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

Related