ಬಾಲಕಿ ಸಾವು : ಪೊಲೀಸರು ವಿರುದ್ಧ ಪ್ರತಿಭಟನೆ

ಬಾಲಕಿ ಸಾವು : ಪೊಲೀಸರು ವಿರುದ್ಧ ಪ್ರತಿಭಟನೆ

ಕಲಬುರಗಿ : ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮೂರು ವರ್ಷದ ಬಾಲಕಿ ಸಾವು ಪ್ರಕರಣ ಘಟನೆಗೆ ಜೇವರ್ಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಯ ಜಿಮ್ಸ್ ಆಸ್ಪತ್ರೆ ಎದುರು ಬಾಲಕಿಯ ಶವ ಇಟ್ಟು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಠಾಣೆಯಲ್ಲಿ ಮಹಿಳೆಯನ್ನು ಥಳಿಸುವ ವೇಳೆ ಮಗುವಿಗೂ ಪೆಟ್ಟಾಗಿದ್ದು, ಪೊಲೀಸರು ಹೊಡೆದ ಪೆಟ್ಟಿನಿಂದಾಗಿಯೇ ಜೈಲಿಗೆ ಹೋದ ನಂತರ ಮಗು ಸಾವನ್ನಪ್ಪಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಈ ವೇಳೆ ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ್ ಅವರು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.  ನೀವು ಪ್ರತಿಭಟನೆ ಕೊನೆಗೊಳಿಸಿಸಿ, ನನಗೆ 24 ಗಂಟೆಗಳ ಅವಕಾಶ ಕೊಡಿ ನಾನು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂಬ ಡಿಸಿ ಮನವಿಗೆ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್  ಕೆಂಡಮಂಡಲವಾದರು.

ಜೇವರ್ಗಿ ಪಿಎಸ್‌ಐ ಸಸ್ಪೆಂಡ್ ಮಾಡಿ ಬಂಧಿಸಬೇಕು. ಪಿಎಸ್‌ಐ ಮೇಲೆ ಕ್ರಮ ತೆಗೆದುಕೊಳ್ಳೊವರೆಗೂ ಪ್ರತಿಭಟನೆ ಸ್ಥಗಿತಗೊಳಿಸದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅವರಿಂದ ಆದೇಶ ಬಂದಿದೆ ಎಂದು ಶಾಸಕ ಅಜಯ್‌ಸಿಂಗ್ ತಿಳಿಸಿದರು.

ನಂತರ ಸಂಬಂಧಿಕರು  ತಡರಾತ್ರಿ ಬಾಲಕಿಯ  ಅಂತ್ಯಸಂಸ್ಕಾರವನ್ನು  ಗ್ರಾಮದಲ್ಲಿ ನೆರವೇರಿಸಿದರು.

Related