ಹೊಸ ಲುಕ್‌ನಲ್ಲಿ ತುಪ್ಪದ ಬೆಡಗಿ

ಹೊಸ ಲುಕ್‌ನಲ್ಲಿ ತುಪ್ಪದ ಬೆಡಗಿ

ಬೆಂಗಳೂರು: ಚಿತ್ರರಂಗದಲ್ಲಿ ನಟ-ನಟಿಯರು ಬೆಳೆಯಬೇಕಾದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಾಲಿನಲ್ಲಿ ನಟಿ ರಾಗಿಣಿ ದ್ವಿವೇದಿ ಕೂಡ ಒಬ್ಬರು. ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಈಗ ಮತ್ತೆ ಪಡ್ಡೆ ಹುಡುಗರ ನಿದ್ದೆ ಕದಿಯಲು ತೆರೆ ಮೇಲೆ ಮಿಂಚುತ್ತಿದ್ದಾರೆ.

ಹೌದು, ನಟಿ ರಾಗಿಣಿ ದ್ವಿವೇದಿ ಅವರು ಹೊಸ ಲುಕ್ ನಲ್ಲಿ ಹೊಸ ವರ್ಷಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಉಡುಗೆಯಲ್ಲಿ ಫೋಟೋಗೆ ಫೋಸ್ ನೀಡಿರುವ ಅವರು, ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.

ರಾಗಿಣಿ ದ್ವಿವೇದಿ ಸಖತ್ ಬೋಲ್ಡ್ ಲುಕ್‌ನಲ್ಲೂ ಕಾಣಿಸಿಕೊಳ್ಳೊದು ಇದೆ. ಸೀರೆಯುಟ್ಟು ತೀರಾ ಗೌರಮ್ಮನ ಹಾಗೆ ಕಾಣಿಸೋದು ಇದೆ. ಇವೆರಡೂ ಅಲ್ಲದೇ ಇದೀಗ ಈ ಒಂದು ಸ್ಪೆಷಲ್ ಲುಕ್ ಅಲ್ಲಿಯೇ ರಾಗಿಣಿ ದ್ವಿವೇದಿ ಹೆಚ್ಚು ಗಮನ ಸೆಳೆದಿದ್ದಾರೆ.

ರಾಗಿಣಿ ದ್ವಿವೇದಿ ಒಂದಷ್ಟು ಸಿನಿಮಾಗಳನ್ನ ಒಪ್ಪಿದ್ದಾರೆ. ತಮಿಳಿನ ‘ಇ ಮೇಲೆ’ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಇದರ ಫಸ್ಟ್ ಲುಕ್ ಕೂಡ ಇತ್ತೀಚೆಗೆ ರಿಲೀಸ್ ಆಗಿದೆ. ಈ ಹಿಂದೆ ರಾಗಿಣಿ ಅಭಿನಯದ ಕಿಕ್ ಸಿನಿಮಾ ರಿಲೀಸ್ ಆಗಿದೆ.

 

Related