ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಮುಗಳಖೋಡ- ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ ಮಂಗಳವಾರ ಸಮೀರವಾಡಿಯ ಸೋಮಯ್ಯಾ ಶಿಶು ನಿಕೇತನ ಪ್ರಾಥಮಿಕ ಶಾಲೆ, ವಿನಯ ಮಂದಿರ ಪ್ರೌಢ ಶಾಲೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಎಸ್ ಹೆಚ್ ಕಟಗಿ ಮಾತನಾಡಿದರು, ಹೆತ್ತ ತಾಯಿ-ತಂದೆಯ ನಂತರ ವಿದ್ಯೆ ಎನ್ನುವ ಜ್ಞಾನ ದೇವಿಯನ್ನು ನಮ್ಮಜೀವನದ ಬೆಳಗಿಸುವ ಗುರುವಿಗೆ ತಕ್ಕ ಶಿಷ್ಯ, ಶಿಷ್ಯನಿಗೆ ತಕ್ಕ ಗುರು ಸಿಕ್ಕುವುದು ಸುಕೃತದ ಫಲವಿದ್ದಂತೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಗುರುವಿಗೆ ಕೊಡುವ ಗೌರವ ಹೆತ್ತ ತಂದೆ-ತಾಯಿಗಳಿಗೂ ಕೊಡುವುದರೊಂದಿಗೆ ಅವರ ಜೀವನದ ಕೊನೆಯ ಕ್ಷಣದವರೆಗೂ ಅವರನ್ನು ಹೂವಿನಂತೆ ನೋಡಿಕೊಳ್ಳುವುದು ಗುರು ಭಕ್ತಿ ಎಂದರು.

ಕಾರ್ಯಕ್ರಮವನ್ನು ಮಹೇಶ ಪಾಟೀಲ್ ನಿರೂಪಿಸಿದರು. ಎಸ್ ಎಸ್ ನಡುವಿನಮನಿ, ಬಿ ಎಸ್ ಬಾಗೇವಾಡಿ, ಆರ್ ಎಸ್ ಕಲ್ಯಾಣಿ, ಬಿ ಬಿ ಮಡಿವಾಳ, ಎಮ್ ಪಿ ಚನ್ನಪ್ಪನ್ನವರ,  ವಿ. ಆರ್ ಪೂಜಾರಿ, ಬಿ ಬಿ ಕೌಜಲಗಿ, ಜಿ ಆರ್ ಮಾದರ, ಎಸ್ ವಾಯ್ ಜಾಲಿಹಾಳ, ಎಸ್ ವಾಯ ನವಲೆ, ಎಮ್ ಬಿ ಕುಳ್ಳೋಳ್ಳಿ, ಎ ಎಸ್ ಬಿಳ್ಳೂರ, ಆಯ್ ಜಿ ಕಿರಗಿ, ಭಾಗಿಯಾಗಿದ್ದರು.

Related