ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದೇ ತಪ್ಪಯ್ತಾ

ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದೇ ತಪ್ಪಯ್ತಾ

ನಾಗ್ಪುರ : ಸ್ನೇಹಿತರ ದಿನದಂದು ತನ್ನ ಮಹಿಳಾ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಯುವಕನನ್ನು ಕೆಲ ಯುವಕರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದುವರೆಗೆ ಐದು ಜನರನ್ನು ಬಂಧಿಸಲಾಗಿದೆ. ಹತ್ಯೆಯಲ್ಲಿ ಹೆಚ್ಚಿನ ಜನರು ಭಾಗಿಯಾಗಿರುವ ಶಂಕೆಯಿದೆ.  ಬುಧವಾರ ಕೊಲೆ ಮಾಡಿ ಶವವನ್ನ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.ಎಂದು ನಾಗಪುರದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸುವ ಮೂಲಕ  ತನಿಖೆ ಆರಂಭಿಸಿದ್ದಾರೆ ಎಂದು ನಂದನವನ್ ಪೊಲೀಸ್ ಸಿಪಿ ಸುನೀಲ್ ಫುಲಾರಿ ಹೇಳಿದ್ದಾರೆ.

Related