ಒಂದೇ ದಿನ 34,884 ಮಂದಿಗೆ ಕೊರೋನಾ

ಒಂದೇ ದಿನ 34,884 ಮಂದಿಗೆ ಕೊರೋನಾ

ನವದೆಹಲಿ: ಭಾರತದಲ್ಲಿ ಕೊರೋನಾ ಶರವೇಗದಲ್ಲಿ ವ್ಯಾಪಿಸುತ್ತಿದ್ದು, 24 ಗಂಟೆಗಳಲ್ಲಿ 34,884 ಮಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು ಸಂಖ್ಯೆ 10,38,716ಕ್ಕೆ ತಲುಪಿದೆ.

ಶುಕ್ರವಾರ ಒಂದೇ ದಿನ 671 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಮೃತರ ಸಂಖ್ಯೆ 26,273 ಆಗಿದೆ.

ಕರ್ನಾಟಕದಲ್ಲಿ 3,693 ಪ್ರಕರಣಗಳು ಕಂಡು ಬಂದಿದೆ. ಒಟ್ಟು ಇದುವರೆಗೆ 55,115 ಪ್ರಕರಣಗಳು ಪತ್ತೆಯಾಗಿದೆ. ಇನ್ನು ದೆಹಲಿಯಲ್ಲಿ ಶುಕ್ರವಾರ ಒಂದೇ ದಿನ 1462, ಮಹಾರಾಷ್ಟ್ರದಲ್ಲಿ 8,308 ಪ್ರಕರಣಗಳು ಪತ್ತೆಯಾಗಿದೆ.

Related