ನಟಿ ಹೆಸರಲ್ಲಿ ವಂಚನೆ!

ನಟಿ ಹೆಸರಲ್ಲಿ ವಂಚನೆ!

ಬೆಂಗಳೂರು : ನಟಿ ಪ್ರಣೀತಾ ಹೆಸರಿನಲ್ಲಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವ್ಯವಸ್ಥಾಪಕರಿಗೆ 13.50 ಲಕ್ಷ ರೂ. ವಂಚಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಹೈಗ್ರೌಂಡ್ ಠಾಣೆ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ವಂಚಕರ ಗುಂಪಿನಲ್ಲಿದ್ದ ವರ್ಷಾ ಎಂಬಾಕೆ ತಾನು ಪ್ರಣೀತಾ ಅವರ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ನೀವು ಹಣ ನೀಡಿದರೆ, ಪ್ರಣೀತಾ ಅವರನ್ನು ರಾಯಭಾರಿ ಆಗಿಸಲು ಅಗ್ರಿಮೆಂಟ್ ಪತ್ರ ಸಿದ್ಧಪಡಿಸುವುದಾಗಿ ಹೇಳಿದ್ದಾಳೆ.

ವಂಚಕಿ ಮಾತನ್ನು ನಂಬಿದ ಅಮರನಾಥ್ ರೆಡ್ಡಿ ಅವರು, 13.50 ಲಕ್ಷ ರೂ. ಹಣ ನೀಡಿದ್ದಾರೆ. ಹಣ ಪಡೆದ ಹೋದ ವಂಚಕರು ಮತ್ತೆ ಮೊಬೈಲ್ ಸಂಪರ್ಕಕ್ಕೂ ಸಿಗದಿದ್ದಾಗ ಮೋಸ ಹೋಗಿರುವುದು ಅರಿತು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ ಠಾಣೆ ಪೊಲೀಸರು ಅಂದು ಆರೋಪಿಗಳು ಭೇಟಿ ನೀಡಿದ್ದ ಹೋಟೆಲ್ನ ಸಿಸಿ ಕ್ಯಾಮೆರಾ ಪರಿಶೀಲಿಸಿ, ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Related