ಭಾಯಿಜಾನ್ ಹೆಸರಲ್ಲಿ ವಂಚನೆ; ಸಲ್ಲು ಹೇಳಿದ್ದೇನೆ?

ಭಾಯಿಜಾನ್ ಹೆಸರಲ್ಲಿ ವಂಚನೆ; ಸಲ್ಲು ಹೇಳಿದ್ದೇನೆ?

ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಕಾರಗಳು ಹೆಚ್ಚಾಗಿ ಕಂಡುಬರುತ್ತಿರುವುದು ಸರ್ವೇಸಾಮಾನ್ಯ. ಅದರಲ್ಲೂ ಸಿನಿಮಾ ರಂಗ ಮತ್ತು ಸಿನಿಮಾದಲ್ಲಿ ನಟನೆ ಮಾಡುತ್ತಿರುವ ನಟ, ನಟಿಯರ ಹೆಸರುಗಳನ್ನು ಹೇಳಿಕೊಂಡು ಹಣ ವಸೂಲಿಗೆ ಇಳಿಯುತ್ತಿರುವುದು ಕಂಡುಬರುತ್ತದೆ.

ಅಂಥದ್ದೇ ಒಂದು ಪ್ರಕರಣ ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರಿನಲ್ಲಿ ನಡೆದಿದೆ. ಹೌದು, ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಎಂದರೆ ಅಭಿಮಾನಿಗಳಿಗೆ ಬಹಳ ಪ್ರೀತಿ. ಇನ್ನು ಸಲ್ಮಾನ್ ಖಾನ್ ಹೆಸರಿನಲ್ಲಿ ಅವರದ್ದೇ ಆದ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.

ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯಿಂದ ಮುಂಬರುವ ಸಿನಿಮಾಗಳಿಗೆ ನಟ, ನಟಿಯರ ಆಯ್ಕೆ ಮಾಡಲಾಗುತ್ತಿದೆ ಎಂದು ಹಣ ವಸೂಲಿಗೆ ಇಳಿದಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಟ ಸಲ್ಮಾನ್ ಖಾನ್ ರವರೆ ಖುದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಸದ್ಯಕ್ಕೆ ಯಾವುದೇ ನಿರ್ಮಾಣವನ್ನು ಮಾಡುತ್ತಿಲ್ಲ, ಹಾಗೂ ಯಾವುದೇ ನಟ, ನಟಿಯರನ್ನು ಆಯ್ಕೆ ಮಾಡುತ್ತಿಲ್ಲ. ನನ್ನ ಹೆಸರಿನಲ್ಲಿ ಮೆಸೇಜು ಇನ್ನಿತರ ಸಂದೇಶಗಳು ಬಂದರೆ ಅಂತವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಅವರಾಗಲೀ ಸಲ್ಮಾನ್ ಖಾನ್ ಫಿಲ್ಮ್ಸ್ ಕಡೆಯಿಂದಾಗಲೀ ಪಾತ್ರಕ್ಕಾಗಿ ಯಾರನ್ನೂ ಆಯ್ಕೆ ಮಾಡುತ್ತಿಲ್ಲ. ನಮ್ಮ ಮುಂದಿನ ಸಿನಿಮಾಗಳಿಗಾಗಿ ಕಲಾವಿದರನ್ನು ಆಯ್ಕೆ ಮಾಡಲು ನಾವು ಯಾವುದೇ ಏಜೆಂಟ್​ಗಳನ್ನು ನೇಮಕ ಮಾಡಿಕೊಂಡಿಲ್ಲ. ಈ ಉದ್ದೇಶದಿಂದ ಬರೋ ಮೆಸೇಜ್ ಹಾಗೂ ಇಮೇಲ್​ಗಳನ್ನು ನಂಬಬೇಡಿ. ಸಲ್ಮಾನ್ ಖಾನ್ ಹಾಗೂ ಅಥವಾ ಸಲ್ಮಾನ್ ಖಾನ್ ಫಿಲ್ಮ್ಸ್ ಹೆಸರು ಬಳಕೆ ಮಾಡಿಕೊಂಡಿದ್ದು ಕಂಡರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Related