‘ಆಶ್ರಯ ಯೋಜನೆಯಲ್ಲಿ ನಿವೇಶನ ಹಂಚಿಕೆಗಾಗಿ ಅಡಿಗಲ್ಲು’

‘ಆಶ್ರಯ ಯೋಜನೆಯಲ್ಲಿ ನಿವೇಶನ ಹಂಚಿಕೆಗಾಗಿ ಅಡಿಗಲ್ಲು’

ಶಹಾಪುರ : ನಗರವು ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿದ್ದು ಜೊತೆಯಲ್ಲಿ ನಿರಾಶ್ರಿತರ ಸಂಖ್ಯೆಯು ಬೆಳೆಯುತ್ತಿದ್ದು ನಿರಾಶ್ರಿತ ಕುಟುಂಬಗಳಿಗೆ ಪ್ರಮಾಣಿಕವಾಗಿ ಆಶ್ರಯ ಯೋಜನೆ ಯಡಿಯಲ್ಲಿ ಸೂರು ಕಲ್ಪಿಸುವುದೇ ಗುರಿಯಾಗಿದೆ ಎಂದು ಸೋಮವಾರ ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಆಶ್ರಯ ಯೋಜನೆಯಲ್ಲಿ ನಗರದ ಹೊರ ವಲಯದಲ್ಲಿರುವ ನಿವೇಶನ ಹಂಚಿಕೆಗಾಗಿ ಸರ್ವೇ ನಂಬರ್ ೧೨೦ ರಲ್ಲಿ ಆಶ್ರಯ ಲೇಔಟ್ ಪೂಜೆ ಸಲ್ಲಿಸಿ ಮಾತಾನಾಡಿದ ಅವರು ನಗರದಲ್ಲಿ ಎಸ್.ಸಿ ಎಸ್.ಟಿ ೩.೫೦, ಲಕ್ಷ ಜನರಲ್ ೨.೭೦ ಲಕ್ಷ ರೂ ಮಂಜೂರಿಯಾಗಿದ್ದು ಒಟ್ಟು ೨೬೪ ಜನರಿಗೆ ಸಹಾಯ ಧನ ನೀಡಲಾಗಿದೆ ಹಾಗೂ ದೇವರಾಜ್ ಅರಸ್, ವಾಜಪೇಯಿ ಹೆಚ್ಚುವರಿ, ಪ್ರದಾನ ಮಂತ್ರಿ ಅವಾಸ್ ಯೋಜನೆಯಡಿ, ವಾಜಪೇಯಿ ನಗರ ವಸತಿ ನಿವಾಸ , ಅಂಬೇಡ್ಕರ ನಿವಾಸ ಯೋಜನೆಯಡಿಯಲ್ಲಿ ೧೦೩೪ ಜನರಿಗೆ ಸಹಾಯ ಧನ ನೀಡಲಾಗಿದೆ. ಆಶ್ರಯ ಕಮಿಟಿಯಲ್ಲಿ ೩೮೨೦ ಅರ್ಜಿ ಸಲ್ಲಿಸಲಾಗಿದ್ದು ೨೯೦೦ ಅರ್ಹ ಫಲಾನುಭವಿಗಳು ಮೂಲಗಳು ಸಿಕ್ಕಿವೇ ಇನ್ನೂ ೯೨೨ ಫಲಾನುಭಿಗಳ ನಿಖರತೆ ಸಿಗದೇ ಇದ್ದು ಮುಂದಿನ ದಿನಗಳಲ್ಲಿ ಆಯಾ ವಾರ್ಡಿನ ಸದಸ್ಯರು, ನಗರಸಭೆ ಸಿಬ್ಬಂದಿಗಳು ಪರಿಶೀಲಿಸಬೇಕು. ಸುಮಾರು ೧೬ ಎಕರೆ ಜಮೀನಿನಲ್ಲಿ ೬೦೦ ರಿಂದ ೭೦೦ ರ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಗುರಿ ಹೊಂದಲಾಗಿದೆ. ನಿವೇಶನ ಹಂಚಿಕೆಯಾದ ಫಲಾನುಭವಿಗಳಿಗೆ ಮನೆ ಕಟ್ಟಲು ವಸತಿ ಸೌಲಭ್ಯ ಕಲ್ಪಿಸಲಾಗುವುದು. ಇತರೆ ಹಿಂದುಳಿದ ವರ್ಗಗಳಿಗೆ ಶೇ ೧೦, ಅನೂಸೂಚಿತ ಬುಡಕಟ್ಟು ಜನಾಂಗದವರಿಗೆ ಶೇ ೩, ಅನುಸೂಚಿತ ಜಾತಿ ಜನಾಂಗದವರಿಗೆ ಶೇ ೧೫, ಪರ್ತಕರ್ತರಿಗೆ ಶೇ ೫, ಅಂಗವಿಕಲರಿಗೆ ಶೇ ೩, ಶಾಸನ ಪ್ರದತ್ತ ನೌಕರಿಗೆ ಶೇ ೨, ಸಾರ್ವಜನಿಕರಿಗೆ ಶೇ ೫೦ ರಷ್ಟು ಅನುದಾನ ಕಲ್ಪಿಸಲಾಗುವುದು. ೧೨ ಎಕರೆ ಜಮೀನಿನಲ್ಲಿ ಲೇಔಟ್ ಅಭಿವೃದ್ಧಿ ಪಡಿಸಲು ೩ ಕೋಟಿ ಯ ಅನುದಾನದ ಬಗ್ಗೆ ಅಂದಾಜು ಪತ್ರಿಕೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಆರಭೋಳ, ಗುರುನಾಥರೆಡ್ಡಿಗೌಡ ಹಳಿಸಗರ, ಮುಖಂಡರಾದ ಮುಸ್ತಫ ದರ್ಬಾನ್, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪೂರಕರ್, ಬಸವರಾಜ ಜಿ ಹಿರೇಮಠ, ಬಸವರಾಜ ಹೆರುಂಡಿ ಕೆಂಚಪ್ಪ ನಗನೂರ, ಸಣ್ಣ ನಿಂಗಣ್ಣ ನಾಯ್ಕೋಡಿ, ಶಾಂತಪ್ಪ ಕಟ್ಟಿಮನಿ, ನಗರಸಭೆ ಸದಸ್ಯ ಸಿದ್ದು ಆರಭೋಳ, ಬಸವರಾಜ ಚೆನ್ನೂರ ಪ್ರಬಾರಿ ಪೌರಾಯುಕ್ತ ದೇವಿಂದ್ರ ಹೆಗಡೆ, ಎಇ ರಜನಿಕಾಂತ, ಪರಿಸರ ಅಭಿಯಂತರರಾದ ಹರೀಶ್ ಸಜ್ಜನ್ಶೆಟ್ಟಿ ಸೇರಿದಂತೆ ಮುಖಂಡರು, ಅಧಿಕಾರಿಗಳು ಇದ್ದರು.

Related