ಬಿಬಿಎಂಪಿ ಮಾಜಿ ಸದಸ್ಯ ನಿಧನ

ಬಿಬಿಎಂಪಿ ಮಾಜಿ ಸದಸ್ಯ ನಿಧನ

ಬೆಂಗಳೂರು : ಬಿಬಿಎಂಪಿ ಮಾಜಿ ಸದಸ್ಯ ಎಂ. ನಾಗರಾಜ್ ಕೋವಿಡ್ ನಿಂದ ನಿಧನರಾಗಿದ್ದಾರೆ. ಎರಡು ಬಾರಿ ಬಿಬಿಎಂಪಿ ಸದ್ಯರಾಗಿ ಅವರು ಆಯ್ಕೆಯಾಗಿದ್ದರು.

ಕೋವಿಡ್ ಸೋಂಕಿಗೆ ತುತ್ತಾಗಿದ್ದ ಎಂ. ನಾಗರಾಜ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

2001ರಲ್ಲಿ ಕುರುಬರಹಳ್ಳಿ, 2010ರಲ್ಲಿ ನಂದಿನಿ ಲೇಔಟ್ ವಾರ್ಡ್ ಗಳಿಂದ ಪಾಲಿಕೆಗೆ ಆಯ್ಕೆಯಾಗಿದ್ದ ನಾಗರಾಜ್ ಲೆಕ್ಕಪತ್ರ ಸ್ಥಾಯಿ ಸಮಿತಿ, ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ನಾಗರಾಜ್ 2015ರಲ್ಲಿ ಸಹ ನಂದಿನಿ ಲೇಔಟ್ ವಾರ್ಡ್ ನಿಂದ ಬಿಬಿಎಂಪಿಗೆ ಸ್ಪರ್ಧಿಸಿದ್ದರು.

Related