ಮಾಜಿ ಮೇಯರ್ ಸಂಪತ್ ರಾಜ್ ಆಪ್ತಸಹಾಯಕ ಬಂಧನ

ಮಾಜಿ ಮೇಯರ್ ಸಂಪತ್ ರಾಜ್ ಆಪ್ತಸಹಾಯಕ ಬಂಧನ

ಬೆಂಗಳೂರು: 48 ಗಂಟೆಗಳ ಬಳಿಕ ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಸಂಪತ್ ರಾಜ್ ಅವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಡಿಜೆ ಹಳ್ಳಿ-ಕೆಜಿ ಹಳ್ಳಿಯಲ್ಲಿ ಗಲಭೆಕೋರರಿಗೆ ನೆರವು ನೀಡಿದ ಆರೋಪದ ಮೇಲೆಗೆ ಸಂಪತ್ ಆಪ್ತ ಸಹಾಯಕ ಅರುಣ್ ನನ್ನು ಸಿಸಿಬಿ ಪೊಲೀಸರು ಈ ಹಿಂದೆ ವಶಕ್ಕೆ ಪಡೆದುಕೊಂಡಿದ್ದರು. ಆಪ್ತನ ಬಂಧನ ಬೆನ್ನಲ್ಲೇ ಸಂಪತ್’ಗೆ ಭೀತಿ ಶುರುವಾಗಿದೆ.

ಎಸ್’ಡಿಪಿಐ ಮುಖಂಡರಾದ ಮುಜಾಮಿಲ್ ಪಾಷ, ಅಯಾಜ್ ಹಾಗೂ ಅಫ್ನಾನ್ ಸೇರಿದಂತೆ ಕೆಲವರ ಜೊತೆ ಮೊಬೈಲ್’ನಲ್ಲಿ ಅರುಣ್ ನಿರಂತರ ಸಂಪರ್ಕದಲ್ಲಿದ್ದ. ಈ ಬಗ್ಗೆ ಆತನ ಮತೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಖಚಿತ ಮಾಹಿತಿ ಸಿಕ್ಕಿತು. ಅಲ್ಲದೆ, ತಮ್ಮ ಮೇಲಿನ ದಾಳಿ ಹಿಂದೆ ಸಂಪತ್ ಹಾಗೂ ಆತನ ಆಪ್ತ ಸಹಾಯಕ ಅರುಣ್ ಇದ್ದರು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅರುಣ್’ನನ್ನು ಬಂಧನ ಪ್ರಕ್ರಿಯಗೊಳಪಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related